ಬೆಂಗಳೂರು : ವ್ಯವಸ್ಥಿತ ಮತ್ತು ಸಮರ್ಪಕವಾದ ಕಾರ್ಗೋ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದ್ದು, ಡಿಸೆಂಬರ್ 23ರಿಂದ 20 ಟ್ರಕ್‌ಗಳನ್ನು ಸೇವೆಗೆ ಇಳಿಸಲಿದೆ. ಈಗಾಗಲೇ ಬಸ್‌ಗಳ ಲಗೇಜ್ ಬಾಕ್ಸ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪಾರ್ಸೆಲ್ ಸೌಲಭ್ಯವನ್ನು ಒದಗಿಸಲಾಗಿತ್ತು.
ಕಾರ್ಗೋ ಟ್ರಕ್ ಸೇವೆ ಡಿ.23ರಿಂದ ಆರಂಭವಾಗಲಿದೆ. ಡೋರ್ ಸ್ಟೆಪ್ ಸೇವೆಯನ್ನು ನೀಡುವ ಉದ್ದೇಶದಿಂದ ಈ ಲಾರಿಗಳನ್ನು ಖರೀಸಲಾಗಿದ್ದು, ಕೆಎಸ್‌ಆರ್ಟಿಸಿ ಈಗಾಗಲೇ ಬಸ್ಗಳಲ್ಲಿ ಕಾರ್ಗೋ ಸೇವೆಯನ್ನು ಆರಂಭಿಸಿದೆ. ಉತ್ಪಾದನಾ ಘಟಕಗಳಿಂದ ಸರಕುಗಳನ್ನು ಸಾಗಿಸುವವರಿಗೆ ಈ ಸೇವೆ ಅನುಕೂಲವಾಗಿದೆ.
KSRTC ಪ್ರಯಾಣಿಕರಿಗೆ ಸಾರಿಗೆ ಸೇವೆಯಿಂದ ಗಳಿಸುವ ಆದಾಯದ ಜೊತೆಗೆ, ಪರ್ಯಾಯ ಆದಾಯಕ್ಕಾಗಿ ಕಾರ್ಗೋ ಟ್ರಕ್ ಕಾರ್ಯಚರಣೆಗೆ ಮುಂದಾಗಿದೆ. ಡಿ.23 ರಂದು ಒಟ್ಟು 20 ನಮ್ಮ ಕಾರ್ಗೋ ಪಾರ್ಸೆಲ್ ಮತ್ತು ಕೋರಿಯರ್ ಟ್ರಕ್ ಗಳಿಗೆ ಚಾಲನೆಯನ್ನು ಸಾರಿಗೆ ಸಚಿವರು ನೀಡಲಿದ್ದಾರೆ.