ಬೆಂಗಳೂರು: ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರು ಮೂಲಕ ಹಾದುಹೋಗಲಿದ್ದು, ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸಲಿದೆ.
ಸೇಲಂ ಮೂಲಕ ಕೆಎಸ್ಆರ್ ಬೆಂಗಳೂರಿನಿಂದ ಕೊಯಮತ್ತೂರು ಜಂಕ್ಷನ್ ಗೆ ಸಂಪರ್ಕ ಕಲ್ಪಿಸುವ ರೈಲಿಗೆ ಭಾರತೀಯ ರೈಲ್ವೆ ತಾತ್ಕಾಲಿಕವಾಗಿ ಅನುಮೋದನೆ ನೀಡಿದೆ.
ಎಕ್ಸ್ಪ್ರೆಸ್ ರೈಲು ಪ್ರಸ್ತುತ ಎರಡು ನಗರಗಳ ನಡುವಿನ ದೂರವನ್ನು ಕ್ರಮಿಸಲು 6 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ಸುಮಾರು ಐದು ಗಂಟೆಗಳನ್ನು ತೆಗೆದುಕೊಳ್ಳಬಹುದು. ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ರೈಲನ್ನು ದಕ್ಷಿಣ ರೈಲ್ವೆಯ ಸೇಲಂ ವಿಭಾಗವು ನಿರ್ವಹಿಸುವ ಸಾಧ್ಯತೆಯಿದೆ ಮತ್ತು ಇದು ಬೆಳಿಗ್ಗೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.