ಚಿಕ್ಕಮಗಳೂರು: ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾಧ್ಯಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ.
ಮುಂಜಾಗೃತಾ ಕ್ರಮವಾಗಿ ಇಬ್ಬರು ಅರ್ಚಕರು ಸೇರಿದಂತೆ ಐದು ಜನರಿಗೆ ಅಂಗರಕ್ಷಕರನ್ನು ನೇಮಕ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ವಿಕ್ರಂ ಆಮ್ಟೆ ಆದೇಶ ಹೊರಡಿಸಿದ್ದಾರೆ.
ಬಾಬಾ ಬುಡನ್ ಸ್ವಾಮಿ ದರ್ಗಾದ ಇಬ್ಬರು ಅರ್ಚಕರಾದ ಶ್ರೀಧರ್ ಪೂಜಾರ್, ಶಿವರಾಂ ಹಾಗೂ ಇಬ್ಬರು ಮುಜಾವರ್ ಗಳಾದ ಸೈಯದ್ ಅಖಿಲ್ ಪಾಷಾ, ಇಸ್ಮಾಯಿಲ್ ಹಾಗೂ ವ್ಯವಸ್ಥಾಪನ ಸಮಿತಿ ಮುಸ್ಲಿಂ ಸದಸ್ಯ ಭಾಷಾ ಅವರಿಗೆ ಒಬ್ಬೊಬ್ಬರು ಅಂಗರಕ್ಷಕರನ್ನು ನೇಮಿಸಲಾಗಿದೆ.
ದತ್ತ ಜಯಂತಿ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಐವರ ಭದ್ರತೆಗಾಗಿ ಗನ್ ಮ್ಯಾನ್ ಗಳನ್ನು ನೇಮಕ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲ ಭದ್ರತೆ ಒದಗಿಸಲಾಗುತ್ತಿದೆ. ಇನ್ನು ಅರ್ಚಕರ ಮೂಲ ನಿವಾಸದ ಬಗ್ಗೆ ಗೌಪ್ಯತೆ ಕಾಪಾಡಲು ಪೊಲೀಸ್ ಇಲಾಖೆ ಮನವಿ ಮಾಡಿದೆ.