ಶಾಲಾ ಮಕ್ಕಳ ʻಬ್ಯಾಗ್ ಹೊರೆʼ ಇಳಿಕೆಗೆ ಮಹತ್ವದ ಕ್ರಮ : 2 ಭಾಗಗಳಾಗಿ ʻಪಠ್ಯ ಮುದ್ರಿಸಲು ಶಿಕ್ಷಣ ಇಲಾಖೆ ನಿರ್ಧಾರ!

ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದೆ, ಬ್ಯಾಗ್‌ ಹೊರೆ ತಗ್ಗಿಸುವ ನಿಟ್ಟಿಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಮುಂದಿನ ವರ್ಷದಿಂದ ಪಠ್ಯ ಗಳನ್ನು ಎರಡು ಭಾಗಗಳಾಗಿ ಮಾಡಲು ನಿರ್ಧರಿಸಲಾಗಿದೆ.

ಕರ್ನಾಟಕ ಪಠ್ಯ ಪುಸ್ತಕ ಸಂಘ ಈ ಕುರಿತು ಆದೇಶ ಹೊರಡಿಸಿದ್ದು, ಇನ್ನು ಮುಂದೆ ಪ್ರತಿ ವಿಷಯದ ಪಠ್ಯಪುಸ್ತಕವೂ ಸೆಮಿಸ್ಟರ್ 1, ಸೆಮಿಸ್ಟರ್ 2 ಎಂದು ಮುದ್ರಣವಾಗಲಿದೆ. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ ಎಂದು ಹೇಳಿದೆ.

ಈ ಮಧ್ಯೆರಾಜ್ಯದ ವಿವಿಧ ಭಾಗಗಳ ಪ್ರಮುಖ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯ ಪಠ್ಯಕ್ರಮದ ಭಾಗವಾಗಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಚಿತ್ರಕಲೆ, ರಂಗಭೂಮಿ, ಸಂಗೀತ ಸೇರಿದಂತೆ ರಾಜ್ಯದ ವಿವಿಧ ಪ್ರದೇ ಶಗಳ ಸಂಸ್ಕೃತಿ, ಕಲೆಗಳನ್ನು ಒಳಗೊಂಡ ಸಮಗ್ರ ಪಠ್ಯವನ್ನು ಶಾಲಾ ಶಿಕ್ಷಣ ನೀತಿಯ ಭಾಗವಾಗಿಸುವಂತೆ ಆಯೋಗಕ್ಕೂ ಸಲಹೆ ನೀಡಲಾಗಿದ್ದು, 2024-25ನೇ ಸಾಲಿ ನಿಂದಲೇ ಅಳವಡಿಸಲಾಗುತ್ತಿದೆ ಎನ್ನಲಾಗಿದೆ.

ಪಠ್ಯಪುಸ್ತಕ ವಿಭಜಿಸಿ ನೀಡುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಕಡಿಮೆಯಾಗಲಿದೆ. ನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಒತ್ತಡ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸಲಿದ್ದು, ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂಪಾಯಿಯಷ್ಟು ಹೆಚ್ಚಾಗಬಹುದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read