ವಿಲ್ಮಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಭಾನುವಾರ ರಾತ್ರಿ ತಮ್ಮ ಪ್ರಧಾನ ಕಚೇರಿಗೆ ಭೇಟಿ ನೀಡಲು ತೆರಳುತ್ತಿದ್ದಾಗ ಅವರ ಮೋಟಾರು ವಾಹನವನ್ನು ಕಾವಲು ಕಾಯುತ್ತಿದ್ದ ಎಸ್ಯುವಿ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ.
ಬೈಡನ್ ಡೆಲವೇರ್ನಲ್ಲಿರುವ ತಮ್ಮ ಪ್ರಚಾರ ಪ್ರಧಾನ ಕಚೇರಿಯಿಂದ ಹೊರಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಜೋ ಬೈಡನ್ ಹಾಗೂ ಜಿಲ್ ಬೈಡನ್ ಅವರಿಗೆ ಯಾವುದೇ ಹಾನಿಯಾಗಿಲ್ಲ.ಯುಎಸ್ ಸೀಕ್ರೆಟ್ ಸರ್ವಿಸ್ ವಾಹನಕ್ಕೆ ಸೆಡಾನ್ ಡಿಕ್ಕಿ ಹೊಡೆದಿದೆ.
ಘಟನೆಯಿಂದ ಅವರ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ನಂತರ, ಭದ್ರತಾ ಸಿಬ್ಬಂದಿ ಕೂಡಲೇ ಬೈಡನ್ನನ್ನು ಕಾರಿನ ಮೂಲಕ ವಿಲ್ಮಿಂಗ್ಟನ್ ಡೌನ್ಟೌನ್ಗೆ ಕಳುಹಿಸಿದರು ಎಂದು ತಿಳಿದು ಬಂದಿದೆ.