ಬೆಂಗಳೂರು : ಸರ್ಕಾರಿ ಜಾಗ, ಅರಣ್ಯ ಭೂಮಿ ಸರ್ವೆ ಕಬಳಿಕೆ ಮಾಡಿದವರಿಗೆ ಬಿಗ್ ಶಾಕ್ ಎದುರಾಗಿದ್ದು, ಇಂದಿನಿಂದ ಸರ್ಕಾರಿ ಜಾಗ, ಅರಣ್ಯ ಭೂಮಿ ಸರ್ವೆ ಕಾರ್ಯ ಆರಂಭವಾಗಲಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ದೊಡ್ಡ ಭೂ ಹಗರಣ ನಡೆದಿದೆ ಎನ್ನಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇಂದು ಭೂಮಾಪಕರು ಸರ್ವೆ ಕಾರ್ಯ ನಡೆಸಲಿದ್ದಾರೆ. ಸರ್ಕಾರಿ ಜಾಗ, ಅರಣ್ಯ ಭೂಮಿ ಸರ್ವೆ ಕಬಳಿಕೆ ಮಾಡಿದವರಿಗೆ ಬಿಗ್ ಶಾಕ್ ಎದುರಾಗಲಿದೆ.
ಇದಕ್ಕಾಗಿ ಸರ್ಕಾರ 15 ಭೂಮಾಪಕರ ತಂಡ ರಚಿಸಿ ಆದೇಶ ಹೊರಡಿದ್ದು, 15 ಭೂಮಾಪಕರ ವಿಶೇಷ ತಂಡ ಇಂದಿನಿಂದ ಸರ್ವೆ ಕಾರ್ಯ ನಡೆಸಲಿದೆ.
ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಹೆಚ್ಚುವರಿ ಭೂಮಿ ಕಂಡು ಬಂದಲ್ಲಿ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ಹೇಳಿದ್ದರು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಚ್ಚುವರಿ ಭೂಮಿ ಕಂಡು ಬಂದರೆ ಗಡಿ ಗುರುತಿಸಿ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದರು.