ಡಬಲ್ ಚಿನ್ ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಿದ್ದಂತೆ. ಸೆಲೆಬ್ರಿಟಿಗಳಂತೆ ಶಾರ್ಪ್ ಫೇಸ್ ನಮ್ಮದಾಗಬೇಕೆಂದು ಎಲ್ಲರೂ ಬಯಸ್ತಾರೆ. ಮುಖದ ಕೊಬ್ಬು ಹೆಚ್ಚಿದಾಗ ಡಬಲ್ ಚಿನ್ ಕಾಣಿಸಿಕೊಳ್ಳುತ್ತದೆ. ಒಮ್ಮೆ ಡಬಲ್ ಚಿನ್ ಬಂದುಬಿಟ್ಟರೆ ಅದನ್ನು ಕರಗಿಸುವುದು ಕಷ್ಟ. ಇದನ್ನು ಶಾಶ್ವತವಾಗಿ ತೆಗೆದುಹಾಕಲು ಕೆಲವೊಂದು ಟಿಪ್ಸ್ ಅನುಸರಿಸಬೇಕು.
ಡಬಲ್ ಚಿನ್‌ನಿಂದ ಮುಕ್ತಿ ಪಡೆಯಲು ಮೊದಲು ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು. ತೂಕ ಕಡಿಮೆಯಾದಾಗ ತಂತಾನೇ ಮುಖದ ಕೊಬ್ಬು ಕೂಡ ಕರಗಿ ಹೋಗುತ್ತದೆ.
ಮುಖದ ವ್ಯಾಯಾಮವು ಫೇಸ್ ಫ್ಯಾಟ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಡಬಲ್ ಚಿನ್ ತೊಡೆದುಹಾಕಲು ಇದು ಅತ್ಯುತ್ತಮ ಮಾರ್ಗವಾಗಿದೆ. ದಿನಕ್ಕೆ 20 ರೀತಿಯ ಮುಖದ ವ್ಯಾಯಾಮಗಳನ್ನು ಮಾಡಬೇಕು.
ಪ್ರತಿದಿನ 2-3 ನಿಮಿಷಗಳ ಕಾಲ ಮುಖಕ್ಕೆ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಮುಖದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ ಮತ್ತು ಡಬಲ್ ಚಿನ್ ಸಮಸ್ಯೆಯೂ ಕಡಿಮೆಯಾಗುತ್ತದೆ.
ಯಾವಾಗಲೂ ಸಿಹಿ ತಿನಿಸುಗಳಿಂದ ಅಂತರ ಕಾಯ್ದುಕೊಳ್ಳಿ. ಹೆಚ್ಚು ಸಿಹಿ ತಿನ್ನುವುದರಿಂದ ಕೊಬ್ಬು ಹೆಚ್ಚಾಗುತ್ತದೆ. ಆಗ ಡಬಲ್ ಚಿನ್ ಹಾಗೂ ಫೇಸ್ ಫ್ಯಾಟ್ ಸಹ ಕಾಣಿಸಿಕೊಳ್ಳುತ್ತದೆ.
ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಸಾಕಷ್ಟು ನಿದ್ದೆ ಮಾಡಿದರೆ ಮಾತ್ರ ದೇಹವು ಫಿಟ್ ಆಗಿರುತ್ತದೆ ಮತ್ತು ಕೊಬ್ಬು ಕಡಿಮೆಯಾಗುತ್ತದೆ. ನಿದ್ರೆಯ ಕೊರತೆಯು ನಮ್ಮ ದೇಹದಲ್ಲಿ ಕಾರ್ಟಿಸೋಲ್ ಅನ್ನು ಹೆಚ್ಚಿಸುತ್ತದೆ. ಅದು ಆರೋಗ್ಯ ಮತ್ತು ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ.