ಬೆಂಗಳೂರು : ಹೊಸ ವರ್ಷಕ್ಕೆ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಲಿದ್ದು, ಮತ್ತೆ ರಾಜ್ಯದಲ್ಲಿ ಮದ್ಯದ ದರ ಹೆಚ್ಚಳವಾಗಲಿದೆ.
ಗ್ಯಾರಂಟಿ ಯೋಜನೆಗಳ ಕೊಡುಗೆಯನ್ನು ನೀಡುತ್ತಿರುವ ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಸಲು ಮತ್ತೆ ಮದ್ಯದ ದರ ಹೆಚ್ಚಳ ಮಾಡಲಿದೆ. ಮದ್ಯ ಮಾರಾಟದಿಂದಲೇ ಸರ್ಕಾರಕ್ಕೆ ಭರ್ಜರಿ ಆದಾಯ ಬರುತ್ತಿರುವ ಹಿನ್ನೆಲೆ ಮದ್ಯದ ಮೇಲೆ ತೆರಿಗೆಯನ್ನು ಹೆಚ್ಚು ಮಾಡಿ ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಕೊಳ್ಳುತ್ತಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ವೇಳೆ ಅಬಕಾರಿ ಸುಂಕ ಶೇ 20 ರಷ್ಟು ಹೆಚ್ಚಳ ಮಾಡಲಾಗಿತ್ತು, ಈಗ ಹೊಸ ವರ್ಷಕ್ಕೆ ಮದ್ಯದ ಕಂಪನಿಗಳು ಸಹ ದರ ದರ ಹೆಚ್ಚಳ ಮಾಡಲಿದೆ. ಮದ್ಯದ ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾದ ಹಿನ್ನೆಲೆ ಮದ್ಯದ ಕಂಪನಿಗಳು ದರ ಹೆಚ್ಚಳ ಮಾಡಲಿದೆ. ಜನವರಿ 1ರಿಂದ ನೂತನ ದರ ಪಟ್ಟಿಯಂತೆ ವಸೂಲಿ ಮಾಡಲು ಬಾರ್ ಮಾಲೀಕರಿಗೆ ಕಂಪನಿಗಳೂ ಸೂಚನೆ ನೀಡಿದೆ ಎನ್ನಲಾಗಿದೆ.
ಇನ್ನೊಂದೆಡೆ ನಿನ್ನೆ ಸುವರ್ಣಸೌಧದ ಬಳಿ ವಿವಿಧ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ಮದ್ಯ ಪ್ರಿಯರು ಪ್ರತಿಭಟನೆ ನಡೆಸಿದ್ದಾರೆ. ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು, ‘ಕುಡುಕ’ ಎಂಬ ಪದ ನಿಷೇಧಿಸಿ ‘ಮದ್ಯಪ್ರಿಯ’ ಎಂದು ಸೇರಿಸಬೇಕು. ಲಿವರ್ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಬೇಕು. ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ, ಬಾರ್ ಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ, ಸ್ವಚ್ಛತೆ, ಮದ್ಯಪ್ರಿಯರ ಭವನ ಸ್ಥಾಪನೆ, ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.