ಉತ್ತರ ದೆಹಲಿಯ ಸಿಗ್ನೇಚರ್ ಫ್ಲೈಓವರ್‌ನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ವ್ಯಕ್ತಿಯೊಬ್ಬ ಸ್ಟಂಟ್ ಮಾಡುತ್ತಾ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು ಪೊಲೀಸರು ಈ ಬಗ್ಗೆ ತನಿಖೆ ಮಾಡ್ತಿದ್ದಾರೆ. ಆಟೋದಲ್ಲಿದ್ದ ವ್ಯಕ್ತಿಯ ಹುಚ್ಚಾಟದಿಂದ ಸಂಭವಿಸಿದ ಈ ಅಪಘಾತದ ದೃಶ್ಯ ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊ ವೈರಲ್ ಆದ ನಂತರ, ಪೊಲೀಸರು ಕ್ರಮ ಕೈಗೊಂಡಿದ್ದು ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಆಟೋರಿಕ್ಷಾ ಮತ್ತು ಅದರ ಚಾಲಕನಾದ ಗಾಜಿಯಾಬಾದ್‌ನ ಶಿವ ಎಂಬುವನನ್ನು ಟಿಪಿಆರ್ ಸರ್ಕಲ್‌ನ ಟ್ರಾಫಿಕ್ ಸಿಬ್ಬಂದಿ ಪತ್ತೆಹಚ್ಚಿದ್ದಾರೆ ಎಂದು ದೆಹಲಿ ಟ್ರಾಫಿಕ್ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಫ್ಲೈ ಓವರ್ ಮೇಲೆ ವೇಗವಾಗಿ ಚಲಿಸ್ತಿದ್ದ ಆಟೋದಲ್ಲಿದ್ದ ವ್ಯಕ್ತಿಯೊಬ್ಬ ಆಟೋದ ತುದಿಯಲ್ಲಿ ನಿಂತು ಕೈ ಬೀಸುತ್ತಾ ಬಾಡಿಯನ್ನ ಸ್ಪ್ರಿಂಗ್ ನಂತೆ ತಿರುಗಿಸುತ್ತಾ ಆಟೋದಲ್ಲಿ ಹುಚ್ಚಾಟ ಮಾಡಿದ್ದ. ಈ ವೇಳೆ ಆಟೋ ಮುಂದೆ ಹೋಗ್ತಿದ್ದ ಸೈಕಲ್ ಸವಾರನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ಗಾಯಗೊಳ್ಳುತ್ತಾರೆ. ಈ ದೃಶ್ಯವನ್ನು ಆಟೋದ ಹಿಂದೆ ಬರ್ತಿದ್ದ ಬೈಕ್ ಸವಾರ ಸೆರೆಹಿಡಿದಿದ್ದಾರೆ.
ಆಟೋ ಚಾಲಕನ ವಿರುದ್ಧ ಅಪಾಯಕಾರಿ ಚಾಲನೆ, ಪರವಾನಗಿ ಇಲ್ಲದೆ ಚಾಲನೆ ಮತ್ತು ಮೋಟಾರು ವಾಹನ ಕಾಯ್ದೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದರೊಂದಿಗೆ ನೆಟ್ಟಿಗರು ಆಟೋದಲ್ಲಿ ಇಂತಹ ಅಜಾಗರೂಕ ವರ್ತನೆ ಖಂಡಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
https://twitter.com/ShahavajAnjum/status/1734632728535212509?ref_src=twsrc%5Etfw%7Ctwcamp%5Etweetembed%7Ctwterm%5E1734632728535212509%7Ctwgr%5Ecf9fbdfbfd00d0842ad11120c8b60a36bad9945d%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-dh45a668314cf54d1db4076a42953091e8%2Fviralvideodelhimanhitscyclistwhileperformingstuntonsignaturebridgeinmovingauto-newsid-n564896344