ಈ ಹಿಂದೆ ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿತ್ತು. ಆದರೆ ಈಗ ಪಿಂಚಣಿದಾರರು ಕಳೆದ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಿದ ದಿನಾಂಕದಿಂದ ಹನ್ನೆರಡು ತಿಂಗಳಿಗೊಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಜೀವನ್ ಪ್ರಮಾಣ ಪತ್ರದ ಸಲ್ಲಿಕೆಯಲ್ಲಿನ ವಿಳಂಬವು ಪಿಂಚಣಿಯನ್ನು ನಿಲ್ಲಿಸಲು ಕಾರಣವಾಗುತ್ತದೆ. ಜೀವನ್ ಪ್ರಮಾಣ ಪತ್ರವನ್ನು ಫೇಸ್ ದೃಢೀಕರಣ ತಂತ್ರಜ್ಞಾನದ ಮೂಲಕ ಸಲ್ಲಿಸಬಹುದು(http://jeevanpranaam.gov.in/package/download) ಹಾಗೂ ಯೂಟ್ಯೂಬ್ ವಿಡಿಯೋ ಲಿಂಕ್ https://youtube/dobsgqk421Q?si=cVEKWUCJToELdFoU FAT ತಂತ್ರಜ್ಞಾನ ಹೇಗೆ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂಬುದನ್ನು ವಿವರಿಸುತ್ತದೆ.
ಇದನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಥವಾ ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆಗಳಲ್ಲಿ ಆನ್ಲೈನ್ನಲ್ಲಿ ಸಲ್ಲಿಸಬಹುದು. ಪಿಂಚಣಿದಾರರು 3 ವರ್ಷಗಳಿಗಿಂತ ಹೆಚ್ಚು ಕಾಲ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ವಿಫಲರಾದರೆ ನಂತರ ಪಿಪಿಓ ರದ್ದತಿಗೆ ಅವಕಾಶವಿದೆ. ಆದ್ದರಿಂದ ಇದುವರೆಗೆ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿದಾರರು/ಫಲಾನುಭವಿಗಳು ಆದ್ಯತೆಯ ಮೇರೆಗೆ ಅದನ್ನು ಸಲ್ಲಿಸುವಂತೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಮನವಿ ಮಾಡಿದ್ದಾರೆ.