ನವದೆಹಲಿ : ಸಂಸತ್ ಕಲಾಪದ ವೇಳೆ ಭದ್ರತಾ ಲೋಪ ನಡೆದಿದ್ದು, ಗ್ಯಾಲರಿಗೆ ಅಪರಿಚಿತ ವ್ಯಕ್ತಿಗಳು ನುಗ್ಗಿದ ಘಟನೆ ಇಂದು ನಡೆದಿದೆ.
ಅಪರಿಚಿತ ವ್ಯಕ್ತಿಗಳು ನುಗ್ಗುತ್ತಿದ್ದಂತೆ ಸಂಸದರು ಓಡಿ ಹೋಗಿದ್ದಾರೆ. ಭದ್ರತಾ ಉಲ್ಲಂಘನೆಯ ನಂತರ ಸದನವನ್ನು ಮುಂದೂಡಲಾಯಿತು.ಸಂಸತ್ ದಾಳಿಯ 22 ನೇ ವಾರ್ಷಿಕೋತ್ಸವದಂದು ಈ ಘಟನೆ ನಡೆದಿದೆ. ಈ ಹಿನ್ನೆಲೆ ಸದನವನ್ನು ಮಧ್ಯಾಹ್ನ 2 ಕ್ಕೆ ಮುಂದೂಡಲಾಗಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಗೆ ಜಿಗಿದಿದ್ದಾರೆ. ಎರಡನೇ ವ್ಯಕ್ತಿಯು ಎಲ್ಎಸ್ನ ಸಾರ್ವಜನಿಕ ಗ್ಯಾಲರಿಯಿಂದ ನೇತಾಡುತ್ತಿದ್ದನು, ಒಂದು ರೀತಿಯ “ಅನಿಲ” ಸಿಂಪಡಿಸುತ್ತಿದ್ದನು, ಅದು ಕಣ್ಣಿನ ಕಿರಿಕಿರಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.