ನಾಳೆಯಿಂದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಣ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ. ಐದು ಪಂದ್ಯಗಳ ಟಿ ಟ್ವೆಂಟಿ ಸರಣಿ ಇದಾಗಿದ್ದು, ಟಿ ಟ್ವೆಂಟಿ ಕ್ರಿಕೆಟ್ ನ ಎಲ್ಲಾ ಲೀಗ್ ಗಳಲ್ಲೂ ಭಾಗವಹಿಸುವ ವೆಸ್ಟ್ ಇಂಡೀಸ್ ತಂಡದ ಆಟಗಾರರ ಅಬ್ಬರದ ಬ್ಯಾಟಿಂಗ್ ಅನ್ನು ವೀಕ್ಷಿಸಬಹುದಾಗಿದೆ. ಇಂಗ್ಲೆಂಡ್ ಹಾಗು ವೆಸ್ಟ್ ಇಂಡೀಸ್ ನಡುವೆ ಈಗಾಗಲೇ ಮೂರು ಏಕದಿನ ಪಂದ್ಯಗಳು ನಡೆದಿದ್ದು, ವೆಸ್ಟ್ ಇಂಡೀಸ್ ತಂಡ ಸರಣಿ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದಿದೆ.
ವೆಸ್ಟ್ ಇಂಡೀಸ್ ಆಟಗಾರರ ಪಟ್ಟಿ ಇಂತಿದೆ;
ರೋವ್‌ಮನ್ ಪೊವೆಲ್ (c) ಮ್ಯಾಥ್ಯೂ ಫೋರ್ಡ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಶಿಮ್ರಾನ್ ಹೆಟ್ಮೆಯರ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ನಿಕೋಲಸ್ ಪೂರನ್, ಆಂಡ್ರೆ ರಸ್ಸೆಲ್, ಶೆರ್ಫಾನ್ ರುದರ್‌ಫೋರ್ಡ್, ರೋಮಾರಿಯೊ ಶೆಫರ್ಡ್,
ಇಂಗ್ಲೆಂಡ್ ತಂಡ;
ಜೋಸ್ ಬಟ್ಲರ್ (c), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ರೆಹಾನ್ ಅಹ್ಮದ್,ಟೈಮಲ್ ಮಿಲ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ರೀಸ್ ಟೋಪ್ಲಿ,ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್ಸ್ಟೋನ್, ಜಾನ್ ಟರ್ನರ್, ಕ್ರಿಸ್ ವೋಕ್ಸ್,