ರಾಜ್ಯದ ರೈತರಿಗೆ ಗುಡ್‌ ನ್ಯೂಸ್‌ : ಈ ವಾರವೇ ʻಡಿಬಿಟಿʼ ಮೂಲಕ ಬರ ಪರಿಹಾರದ ಹಣ ಖಾತೆಗೆ ಜಮಾ

ಬೆಳಗಾವಿ : ಬರದಿಂದ ತತ್ತರಿಸಿರುವ ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಈ ವಾರವೇ ರೈತರಿಗೆ ಬರ ಪರಿಹಾರದ ಹಣವನ್ನು ಡಿಬಿಟಿ ಮೂಲಕ ಪಾವತಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಕುರಿತು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದು, ರಾಜ್ಯದ ರೈತರಿಗೆ ಈ ವಾರವೇ ನಗದು ನೇರ ವರ್ಗಾವಣೆ ಮೂಲಕ ಬರ ಪರಿಹಾರವನ್ನು ಪಾವತಿಸಲಾಗುವುದು. ಬರದಿಂದ 48 ಲಕ್ಷ ಹೆಕ್ಟೇರ್‌ ನಲ್ಲಿನ ಬೆಳೆ ಹಾನಿಯಾಗಿದೆ. ಸರ್ಕಾರದಿಂದ ಮೊದಲ ಕಂತಾಗಿ 2,000 ರೂ. ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜನವರಿ, ಫೆಬ್ರವರಿ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಬಹುದಾದ 6,237 ಸಮಸ್ಯಾತ್ಮಕ ಗ್ರಾಮಗಳು ಹಾಗೂ ನಗರ ಪ್ರದೇಶಗಳ 914ವಾರ್ಡ್‌ ಗುರುತಿಸಲಾಗಿದೆ. ಇವುಗಳಿಗೆ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read