ಚಿತ್ರದುರ್ಗ: ಜಾತಿ ಕಾರಣಕ್ಕೆ ನನಗೆ ನಾಗ್ಪುರದ ಆರ್.ಎಸ್.ಎಸ್ ನ ಹೆಡಗೇವಾರ್ ಮ್ಯೂಸಿಯಂ ಗೆ ಪ್ರವೇಶ ನೀಡಲಿಲ್ಲ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು. ಗೂಳಿಹಟ್ಟಿ ಶೇಖರ್ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಿಜೆಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿ, ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ್ದು, ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಆಡಿಯೋದಲ್ಲಿ ನಾನು ಹೆಡಗೇವಾರ್ ಮ್ಯೂಸಿಯಂ ಗೆ ಹೋಗಿರುವ ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಿಸಿದ್ರೆ ನಿಮ್ಮ ಮನೆಯ ಜೀತಕ್ಕೆ ಇರುತ್ತೇನೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ನಿನ್ನೆ ಮೊನ್ನೆ ಕಮೆಂಟ್ ಮಾಡಿರುವ ಎಲ್ಲ ಬಿಜೆಪಿ ನಾಯಕರ ಮನೆಯಲ್ಲಿ ಅವರು ಹೇಳಿದ ಶಿಕ್ಷೆಗೆ ಸಿದ್ಧ. ಯಾರನ್ನೋ ಮೆಚ್ಚಿಸೋಕೆ ಹೇಳೋಕೆ ಹೋಗ್ಬೇಡಿ. ಎಂಟು ತಿಂಗಳ ಹಿಂದೆ ಯಾಕೆ ಹೇಳಿಲ್ಲ ಅಂತ ಕೇಳಿದೀರಿ. ನಾನು 8 ತಿಂಗಳ ಹಿಂದೆ ಇದನ್ನು ಹೇಳಿದ್ದರೆ ನೀವು ಇನ್ನಷ್ಟು ಸೀಟು ಕಳೆದುಕೊಳ್ಳುತ್ತಿದ್ರಿ. ಅದ್ಕೆ ಹೇಳಿಲ್ಲ. ಮಾತಿನ ಮುಂಚೆ ಯೋಚನೆ ಮಾಡಬೇಕು ಎಂದು ಗುಡುಗಿದ್ದಾರೆ.