ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಐದು ಭರವಸೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2000 ರೂ.ಹಣ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರ ಖಾತೆಗೆ ಇನ್ನೂ ಕೂಡ ಜಮಾ ಆಗಿಲ್ಲ. ಕೆಲವು ತಾಂತ್ರಿಕ ದೋಷಗಳಿಂದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದರೆ ನಿಮ್ಮ ಹಣವನ್ನು ನಿಮ್ಮ ಯಜಮಾನನ ಖಾತೆಗೆ ಬರುವಂತೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಹಲವು ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಜೊತೆಗೆ ಲಿಂಕ್ ಆಗುತ್ತಿಲ್ಲ. ಸರ್ಕಾರದಿಂದ ಹಣ ಜಮಾ ಆಗಿದ್ದರು ಕೂಡ ಯಜಮಾನಿಯರ ಖಾತೆಗೆ ಮಾತ್ರ ಹಣ ಬಂದು ತಲುಪುತ್ತಿಲ್ಲ. ಆದ್ದರಿಂದ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಕುಟುಂಬದಲ್ಲಿ ಮತ್ತೊಬ್ಬ ಮಹಿಳೆ ಇದ್ದರೆ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ, ಇಲ್ಲದೆ ಇದ್ದಲ್ಲಿ ಆಗ ಮನೆಯ ಯಜಮಾನ ಅಥವಾ ಮನೆಯ ಹಿರಿಯ ಪುರುಷ ಸದಸ್ಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಆದರೆ ಬಹುಮುಖ್ಯವಾದ ವಿಚಾರ ಅಂದರೆ ಎರಡನೇ ಸದಸ್ಯರ ಬ್ಯಾಂಕ್ ಖಾತೆ ಅಪ್ಡೇಟ್ ಆಗಿರಬೇಕು ಆಧಾರ್ ಲಿಂಕ್ ಕೆವೈಸಿ ಎಲ್ಲಾ ಮುಗಿಸಿರಬೇಕು. ಆಗಲೇ ಈ ಪ್ರಕ್ರಿಯೆ ಸಾಧ್ಯವಾಗೋದು.
ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ತಾಲೂಕು ಅಧಿಕಾರಿಗಳು ಅಥವಾ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಬಹುದು.
ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾದ ಹಲವು ತಾಂತ್ರಿಕ ದೋಷಗಳು ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಹಣ ಜಮೆಯಾಗದೇ ಇರುವವರ ಬಳಿ ಸರ್ಕಾರ ಹೋಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದು, ಇನ್ನೂ ಹಣ ಸಿಗದವರು ಅದಾಲತ್ ನಲ್ಲಿ ದೂರು ಕೊಡಬಹುದು.