ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸಿನಿಮಾಗೆ ಕಾಲಿಟ್ಟ ಆರಂಭದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಹಲವು ಬಾರಿ ಸಿನಿಮಾ ಸಮಾರಂಭಗಳಲ್ಲಿ ಭಾಗವಹಿಸಲು ಹಣವಿಲ್ಲದೇ ಪರದಾಡಿದ್ದಾಗಿಯೂ ಹೇಳಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ಹೆಚ್ಚಿನ ಹಣಕಾಸಿನ ಕಷ್ಟವಿತ್ತು. ಸಿನಿಮಾ ಸಮಾರಂಭಗಳಲ್ಲಿ ಭಾಗವಹಿಸಲು ಸ್ಟೈಲಿಂಗ್ ವೆಚ್ಚಗಳನ್ನು ಭರಿಸಲು ಆಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಈವೆಂಟ್‌ಗಳಿಗೆ ಹಾಜರಾಗಲು ಕಾರುಗಳನ್ನು ಬಾಡಿಗೆಗೆ ಪಡೆಯುವುದು ಮತ್ತು ತಮ್ಮ ಇಮೇಜ್ ಕಾಪಾಡಿಕೊಳ್ಳಲು ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಂತೆ ಎದುರಿಸಿದ ಸವಾಲುಗಳನ್ನು ಬಹಿರಂಗಪಡಿಸಿದ್ದಾರೆ.
ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಭೂಮಿ ತನ್ನ ಚೊಚ್ಚಲ ಚಿತ್ರ, ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ “ದಮ್ ಲಗಾ ಕೆ ಹೈಸಾ” ದ ಸಿನಿಮಾ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಸುಮಾರು 15 ಪ್ರಶಸ್ತಿ ಸಮಾರಂಭಗಳಿಗೆ ಹಾಜರಾಗಿರುವುದನ್ನು ವಿವರಿಸಿದ ಅವರು ಆರಂಭಿಕ ಎರಡು ವರ್ಷಗಳವರೆಗೆ ಉಚಿತವಾಗಿ ಸ್ಟೈಲಿಂಗ್ ಸೇವೆ ಒದಗಿಸಿದ ತನ್ನ ಸ್ಟೈಲಿಸ್ಟ್ ಫ್ರೆಂಡ್ ನೆರವನ್ನು ಸ್ಮರಿಸಿದ್ದಾರೆ. ಈವೆಂಟ್‌ಗಳು ಮತ್ತು ಪ್ರಶಸ್ತಿ ಸಮಾರಂಭಗಳಿಗೆ ಹೋಗಲು ತನ್ನ ಫ್ರೆಂಡ್ ಕಾರನ್ನು ಬಳಸಿದ್ದಾಗಿಯೂ ನೆನಪಿಸಿಕೊಂಡಿದ್ದಾರೆ.
ಸಿನಿಮಾ ಸಮಾರಂಭಗಳಲ್ಲಿ ಸ್ಟೈಲಿಂಗ್ ಒಂದು ಮಹತ್ವದ ಅಂಶವಾಗಿದೆ ಮತ್ತು ಇದು ದುಬಾರಿ ಪ್ರಕ್ರಿಯೆಯಾಗಿದೆ ಎಂದು ಹೇಳಿದ ಭೂಮಿ, ಕೇವಲ ಸ್ಟೈಲಿಂಗ್‌ಗೆ 15 ರಿಂದ 20 ಸಾವಿರ ರೂ., ಕಾರು ಬಾಡಿಗೆ 15 ಸಾವಿರದಿಂದ 20 ಸಾವಿರ, ಮತ್ತು ಹೇರ್ ಸ್ಟೈಲ್ – ಮೇಕ್ಅಪ್ ಗೆ ಹೆಚ್ಚುವರಿ 20 ಸಾವಿರ ರೂ. ಬೇಕಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಗೆ ಇಂತಹ ಕಾರ್ಯಕ್ರಮಕ್ಕಾಗಿ 75 ಸಾವಿರದಿಂದ ರಿಂದ 80 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಸಿನಿಮಾ ಸಮಾರಂಭಗಳಿಗೆ ಹೋಗಲು ತನ್ನ ತಾಯಿ ಬಳಿ ಹಣ ಕೇಳಿದ್ದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಭೂಮಿ ಕೊನೆಯದಾಗಿ ಅನಿಲ್ ಕಪೂರ್, ಕುಶಾ ಕಪಿಲಾ, ಡಾಲಿ ಸಿಂಗ್ ಮತ್ತು ಶೆಹನಾಜ್ ಗಿಲ್ ಅವರೊಂದಿಗೆ ʼಥ್ಯಾಂಕ್ಯು ಫಾರ್ ಕಮಿಂಗ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.