![](https://kannadadunia.com/wp-content/uploads/2023/12/kalaburgi-lawyer.jpg)
ಕಲಬುರ್ಗಿ: ಕೋರ್ಟ್ ಗೆ ಹೋಗುತ್ತಿದ್ದ ವಕೀಲ ಈರಣ್ಣಗೌಡ ಪಟೀಲ್ ಎಂಬುವವರನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ಕುರಿತು ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಲಬುರ್ಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್, ಇಂದು ಬೆಳಿಗ್ಗೆ ಕೋರ್ಟ್ ಗೆ ಹೋಗುತ್ತಿದ್ದಾಗ ವಕೀಲ ಈರಣ್ಣ ಮೆಲೆ ಅಟ್ಯಾಕ್ ಮಾಡಿದ್ದಾರೆ. ಹಂತಕರ ಪತ್ತೆಗಾಗಿ ಪೊಲೀಸರ ಎರಡು ತಂಡ ರಚನೆ ಮಾಡಲಾಗಿದೆ. ಸ್ಥಳದಲ್ಲಿ ಸಿಕ್ಕ ಕೆಲ ಮಾಹಿತಿ ಮೇರೆಗೆ ಶೋಧ ನಡೆಸಲಾಗಿದೆ ಎಂದರು.
ನಮ್ಮ ತಂಡ ಹಂತಕರ ಜಾಡು ಹಿಡಿದು ಹೋಗಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೋರ್ಟ್ ಗೆ ಹೋಗುತ್ತಿದ್ದ ವಕೀಲ ಈರಣ್ಣಗೌಡ ಪಾಟೀಲ್ ಎಂಬುವವರನ್ನು ಇಂದು ಬೆಳಿಗ್ಗೆ ದುಷ್ಕರ್ಮಿಗಳು ಅರ್ಧ ಕಿ.ಮೀವರೆಗೆ ಮಚ್ಚು ಹಿಡಿದು ಅಟ್ಟಾಡಿಸಿಕೊಂಡು ಬಂದು ಕಲಬುರ್ಗಿಯ ಸಾಯಿಮಂದಿರ ಬಳಿಯ ಅಪಾರ್ಟ್ ಮೆಂಟ್ ಬಳಿ ಹತ್ಯೆ ಮಾಡಿದ್ದರು.