ರಾಜ್ಯದ ʻAPL-BPLʼ ಕುಟುಂಬಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ʻಆರೋಗ್ಯ ಕಾರ್ಡ್ʼನಡಿ ದೇಶಾದ್ಯಂತ ಚಿಕಿತ್ಸೆಗೆ ಅವಕಾಶ

ಬೆಳಗಾವಿ : ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ದೇಶಾದ್ಯಂತ ಚಿಕಿತ್ಸೆ ಪಡೆಯಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ.

ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಹೊಸ ರೂಪ ನೀಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಹೆಸರಲ್ಲಿ ಇನ್ಮುಂದೆ ಹೆಲ್ತ್ ಕಾರ್ಡ್‌ಗಳು ರಾಜ್ಯದ ಜನಸಾಮಾನ್ಯರಿಗೆ ತಲುಪಲಿವೆ.‌

ರಾಜ್ಯದ ಬಿಪಿಎಲ್ ಕಾರ್ಡುದಾರರು ₹5 ಲಕ್ಷ ಹಾಗೂ APL ಕಾರ್ಡುದಾರರಿಗೆ ಗರಿಷ್ಠ ₹1.50 ಲಕ್ಷ ಮೌಲ್ಯದ ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸಲಿದೆ. ಯೋಜನೆಗೆ ಕೇಂದ್ರದಿಂದ ಶೇ. 34ರಷ್ಟು ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಶೇ.66ರಷ್ಟು ಅನುದಾನವನ್ನ ಒದಗಿಸಲಿದೆ. ರಾಜ್ಯದ ಆಸ್ಪತ್ರೆಗಳ ಜೊತೆಗೆ ದೇಶದ ಇತರ ರಾಜ್ಯಗಳ ಆಸ್ಪತ್ರೆಗಳಲ್ಲೂ ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read