ಮಧ್ಯ ಫಿಲಿಪ್ಪೀನ್ಸ್ ನ ಪ್ರಾಚೀನ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಯಾಣಿಕರ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ.
ಮಧ್ಯ ಫಿಲಿಪೈನ್ಸ್ ನಲ್ಲಿ ಪ್ರಯಾಣಿಕರಿದ್ದ ಬಸ್ ನಿಯಂತ್ರಣ ಕಳೆದುಕೊಂಡು ಬಂಡೆಯಿಂದ ಉರುಳಿದ ಪರಿಣಾಮ 19 ಜನರು ಸಾವನ್ನಪ್ಪಿದ್ದಾರೆ ಮತ್ತು 21 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ರಾಜಧಾನಿ ಮನಿಲಾಗೆ ತೆರಳುತ್ತಿದ್ದ ಬಸ್ ಮಂಗಳವಾರ ತಡರಾತ್ರಿ ಮಿಂಡೊರೊ ದ್ವೀಪದ ಪರ್ವತ ರಸ್ತೆಯಿಂದ ಜಾರಿದೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರ ಇಮೆಲ್ಡಾ ಟೊಲೆಂಟಿನೊ ತಿಳಿಸಿದ್ದಾರೆ.
ಅಪಘಾತಕ್ಕೆ ತಾಂತ್ರಿಕ ತೊಂದರೆ ಇದೆಯೇ ಅಥವಾ ಚಾಲಕ ನಿದ್ರೆಗೆ ಜಾರಿದ್ದನಾ..? ಚಾಲಕ ಏಕೆ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಟೊಲೆಂಟಿನೊ ತಿಳಿಸಿದರು.