ಕೊಪ್ಪಳ : ನಿದ್ರೆಗೆ ಜಾರಿದಾಗಲೇ ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ವಟಪರ್ವಿ ಗ್ರಾಮದ ಪ್ರಭುರಾಜ ಎಂಬಾತನನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರಭುರಾಜ ತೋಟದ ಮನೆಯಲ್ಲಿ ಜಗಲಿ ಕಟ್ಟೆ ಮೇಲೆ ಮಲಗಿದ್ದಾಗ ದಾಳಿ ನಡೆಸಿದ ಹಂತಕರು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.