alex Certify ಒತ್ತಡ – ಬಿಪಿ ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡ – ಬಿಪಿ ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್‌

ಜೀವನದಲ್ಲಿ ಸೋಲು-ಗೆಲುವು ಸಹಜ. ಸೋತಾಗ ಅಥವಾ ಗೆದ್ದಾಗ ಸಹಜವಾಗಿಯೇ ರಕ್ತದೊತ್ತಡ ಏರುಪೇರಾಗಬಹುದು. ಅಂತಹ ಸಂದರ್ಭಗಳಲ್ಲಿ ಬಿಪಿ ನಿಯಂತ್ರಣಕ್ಕೆ ಕೆಲವು ನೈಸರ್ಗಿಕ ಕ್ರಮಗಳನ್ನು ಅನುಸರಿಸಬಹುದು.

ಅಧಿಕ ರಕ್ತದೊತ್ತಡವು ಅಪಾಯಕಾರಿ ಸಮಸ್ಯೆ. ಇದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಮಾರಣಾಂತಿಕ ಪರಿಸ್ಥಿತಿಗಳು ಉಂಟಾಗಬಹುದು. ಹಾಗಾಗಿ ಅಧಿಕ ರಕ್ತದೊತ್ತಡವನ್ನು ತಕ್ಷಣವೇ ಕಡಿಮೆ ಮಾಡಲು ಏನು ಮಾಡಬೇಕು ಎಂಬುದನ್ನು  ತಿಳಿದುಕೊಳ್ಳೋಣ.

ಆಳವಾದ ಉಸಿರನ್ನು ತೆಗೆದುಕೊಳ್ಳಿಬಿಪಿ ಹೆಚ್ಚಾದಾಗ ಅಥವಾ ಕಡಿಮೆಯಾದಾಗ ಮೊದಲು ಹೊಟ್ಟೆಯಿಂದ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಕನಿಷ್ಠ ಎರಡು ಸೆಕೆಂಡುಗಳ ಕಾಲ ಉಸಿರನ್ನು ಹಿಡಿದುಕೊಳ್ಳಿ. ನಂತರ ನಿಧಾನವಾಗಿ ಸಂಪೂರ್ಣವಾಗಿ ಬಿಡುತ್ತಾ ಬನ್ನಿ. ಎರಡು ಸೆಕೆಂಡುಗಳ ಕಾಲ ಕಾಯ್ದು ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ಪುನರಾವರ್ತಿಸಿ. ಇದು ಬಿಪಿಯನ್ನು ನಿಯಂತ್ರಿಸುತ್ತದೆ.

ವಿಶ್ರಾಂತಿ ಪಡೆಯಿರಿಟೆನ್ಶನ್‌ನಿಂದಾಗಿ ಬಿಪಿ ಹೆಚ್ಚಾಗಬಹುದು, ಇಂತಹ ಪರಿಸ್ಥಿತಿಯಲ್ಲಿ ಒತ್ತಡ ಕೂಡ ಸಹಜ. ಹಾಗಾಗಿ ಸ್ವಲ್ಪ ಸಮಯದವರೆಗೆ ಹಾಸಿಗೆಯ ಮೇಲೆ ಮಲಗಿಕೊಂಡು ವಿಶ್ರಾಂತಿ ಪಡೆಯಿರಿ. ಮನಸ್ಸನ್ನು ಶಾಂತವಾಗಿಡಲು ನಿಮ್ಮ ನೆಚ್ಚಿನ ಹಾಡನ್ನು ಕೇಳಿ ಅಥವಾ ಪುಸ್ತಕವನ್ನು ಓದಿ.

ಉಗುರು‌ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಬಿಪಿ ನಿಯಂತ್ರಿಸಲು ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಈ ಪರಿಹಾರವು ನಿಮ್ಮ ಸ್ನಾಯುಗಳು ಮತ್ತು ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಕಡಿಮೆ ಮಾಡಲು ಸಾಕಷ್ಟು ಜಾಗವನ್ನು ಒದಗಿಸುತ್ತದೆ. ಬಿಪಿ ಅಪಾಯದ ಮಟ್ಟವನ್ನು ತಲುಪಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದಲ್ಲದೆ ಬಿಪಿ ನಿಯಂತ್ರಿಸಲು ಈ ಕ್ರಮಗಳನ್ನು ಅನುಸರಿಸಿ,

ಸಿಗರೇಟ್ ಸೇದಬೇಡಿ

ಆಲ್ಕೋಹಾಲ್ ಅಥವಾ ಕೆಫೀನ್ ಸೇವನೆ ಬೇಡ

ಸಾಕಷ್ಟು ನಿದ್ದೆ ಮಾಡಿ ಮತ್ತು ಒತ್ತಡಕ್ಕೆ ಒಳಗಾಗಬೇಡಿ

ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳಿ

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...