ಬಳ್ಳಾರಿ : ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆಗಳಾದ ರೈತರ ವಿಧವಾ ವೇತನ, ಮನಸ್ವನಿ ಯೋಜನೆ, ಮೈತ್ರಿ ಯೋಜನೆ, ಸಂಧ್ಯಾ ಸುರಕ್ಷ ಯೋಜನೆ, ಅಂಗವಿಕಲ ಯೋಜನೆ, ನಿರ್ಗತಿಕ ವಿಧಾನ ವೇತನ ಹಾಗೂ ವೃದ್ಯಾಪ್ಯ ವೇತನ ಪಡೆಯುತ್ತಿರುವ ಬಳ್ಳಾರಿ ಜಿಲ್ಲೆಯ ಪಿಂಚಣಿದಾರರು ತಮ್ಮ ಬ್ಯಾಂಕ್ ಖಾತೆ ಮತ್ತು ಅಂಚೆ ಖಾತೆಗಳಿಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮತ್ತು ಇ-ಕೆವೈಸಿ ಜೋಡಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಒಂದು ವೇಳೆ ಫಲಾನುಭವಿಗಳು ಆಧಾರ್ ಜೋಡಣೆ ಮತ್ತು ಇ-ಕೆವೈಸಿ ಜೋಡಣೆಯನ್ನು ಮಾಡಿಸದಿದ್ದಲ್ಲಿ ಸರ್ಕಾರದಿಂದ ಪಾವತಿಸುವ ವೇತನವು ಸ್ಥಗಿತಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.