ಬೆಂಗಳೂರು: ಮಾಲ್ಡಿವ್ಸ್ ಪ್ರವಾಸಿಗರಿಗೆ ಗುಡ್ ನ್ಯೂಸ್. ಮಾಲ್ಡಿವ್ಸ್ ನ ವಿಮಾನಯಾನ ಸಂಸ್ಥೆ ಮಾಂಟಾ ಏರ್ ಲೈನ್ಸ್ ಹೊಸ ವರ್ಷದಿಂದ ಬೆಂಗಳೂರಿನಿಂದ ಮಾಲ್ಡಿವ್ಸ್ ಗೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ.
2024ರ ಜನವರಿಯಿಂದ ಬೆಂಗಳೂರು ಹಾಗೂ ಮಾಲ್ಡಿವ್ಸ್ ನಡುವೆ ಹೊಸ ನೇರ ವಿಮಾನ ಮಾರ್ಗ ಪ್ರಾರಂಭವಾಗಲಿದೆ. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣದಂತಹ ಸ್ಥಳಗಳಿಗೆ ವಿಸ್ತರಿಸಲು ಮಾಂಟಾ ಏರ್ ನಿರ್ಧರಿಸಿದೆ.
ಈ ವಿಮಾನಗಳು ವಾರದಲ್ಲಿ ಮೂರು ದಿನಗಳು ಕಾರ್ಯನಿರ್ವಹಿಸಲಿದ್ದು, ಎಲ್ಲಾ ವಿಮಾನಗಳು ಬೆಳಿಗ್ಗೆ ಮಾಲ್ಡಿವ್ಸ್ ಗೆ ಹಾಗೂ ಸಂಜೆ ಮಾಲ್ಡಿವ್ಸ್ ನಿಂದ ಭಾರತಕ್ಕೆ ಹೊರಡಲಿವೆ. ಮಾಂಟಾ ವಿಮಾನ ಯಾನ ಸಂಸ್ಥೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್ ನ ಧಾಲು ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳನ್ನು ನಿರ್ವಹಿಸುತ್ತದೆ. ಇದರಿಂದ ಪ್ರಯಾಣಿಕರು ಮಾಲೆಯಲ್ಲಿರುವ ಮುಖ್ಯ ವೇಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗುವ ತೊಂದರೆಗಳು ತಪ್ಪುತ್ತವೆ.
ಇದು ಪ್ರವಾಸಿಗರಿಗೆ ಹೆಚ್ಚುವರಿ ವೆಚ್ಚ ತಪ್ಪಿಸಲು ಹಾಗೂ ಧಾಲು ಹವಳದಲ್ಲಿರುವ ಅನೇಕ ಐಷಾರಾಮಿ ರೆಸಾರ್ಟ್ ಗಳಿಗೆ ನೇರ ಪ್ರವೇಶ ಪಡೆಯಲು ಅನುವುಮಾಡಿಕೊಡಲಿದೆ.