ಮಗನ ಸಾವಿನ ನೋವಲ್ಲೂ ಅಂಗಾಂಗ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದ ಕುಟುಂಬ

ಚಾಮರಾಜನಗರ: ಪುತ್ರನನ್ನು ಕಳೆದುಕೊಂಡ ನೋವಿನ ನಡುವೆಯೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ ಕುಟುಂಬದವರು ಮೃತನ ಅಂಗಾಂಗ ದಾನ ಮಾಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಶಿಂಡನಪುರದ ಸುಬ್ಬಪ್ಪ ಅವರ ಪುತ್ರ ಕುಮಾರ್(39) ನಾಲ್ಕಾರು ಮಂದಿಗೆ ಅಂಗಾಂಗ ದಾನದ ಮೂಲಕ ಅವರ ಜೀವನದಲ್ಲಿ ಬೆಳಕು ಮೂಡಿಸಿದ್ದಾರೆ. ನವೆಂಬರ್ 26ರಂದು ಸಮಾರಂಭಕ್ಕೆ ತೆರಳುವ ವೇಳೆ ರಸ್ತೆ ಅಪಘಾತದಲ್ಲಿ ಕುಮಾರ್ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಹೇಳಿದ್ದು, ಅಂಗಾಂಗ ದಾನದ ಬಗ್ಗೆ ಕುಮಾರ್ ಅವರ ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟರು.

ಕುಟುಂಬದವರ ಒಪ್ಪಿಗೆಯ ನಂತರ ಅಂಗಾಂಗಗಳನ್ನು ಪಡೆದು ಮೃತದೇಹ ಹಸ್ತಾಂತರ ಮಾಡಲಾಗಿದೆ. ಪುತ್ರನ ಸಾವಿನ ನೋವಿನಲ್ಲಿಯೂ ಅಂಗಾಂಗ ದಾನದ ಮೂಲಕ ಹಲವರ ಜೀವ ಉಳಿಸಿದ ಕುಟುಂಬದವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read