ಇಬ್ಬರು ಪುಟಾಣಿಗಳ ನಿಷ್ಕಲ್ಮಷವಾದ ಸ್ನೇಹ ಎಂತವರನ್ನೂ ಮಂತ್ರಮುಗ್ಧರಾನ್ನಾಗಿಸುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇಬ್ಬರು ಪುಟ್ಟ ಮಕ್ಕಳ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಯಾವುದೋ ಜಾತ್ರೆ, ಮೈದಾನದಲ್ಲಿ ಒಂದಿಷ್ಟು ಗೊಂಬೆ, ಬಲೂನ್ ಗಳನ್ನು ಹಿಡಿದು ಮಾರುತ್ತಿರುವ ಮಹಿಳೆ… ಆಕೆಯ ಪಕ್ಕದಲ್ಲೇ ನಿಂತಿದ್ದ ಮಹಿಳೆಯ ಪುಟ್ಟ ಮಗುವನ್ನು ಕಂಡ ಇನ್ನೊಂದು ಪುಟಾಣಿ ಮಗು ಖುಷಿಯಿಂದ ಹೆಜ್ಜೆ ಹಾಕಲು ಶುರು ಮಾಡಿದೆ. ಇದನ್ನು ಕಂಡ ಮಹಿಳೆಯ ಪುಟ್ಟ ಕಂದಮ್ಮ ಸಂತೋಷದಿಂದ ಕುಣಿಯುತ್ತಿದ್ದ ಮಗುವನ್ನು ಸ್ನೇಹದಿಂದ ತಬ್ಬಿದೆ. ಕೆಲವೇ ಸೆಕೆಂಡುಗಳ ಈ ಮಕ್ಕಳ ವಿಡಿಯೋ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.
ಮಕ್ಕಳೆಂದರೆ ದೇವರ ಸಮಾನ… ಬಡವ, ಶ್ರೀಮಂತ, ಮೇಲು,ಕೀಳು, ಜಾತಿ, ಧರ್ಮ ಯಾವುದೇ ಭೇದ ಭಾವಗಳಿಲ್ಲ. ಮಕ್ಕಳ ಮನಸ್ಸೇ ಪರಿಶುದ್ಧ… ಬಲೂನುಗಳನ್ನು ಮಾರುತ್ತಿದ್ದ ಮಹಿಳೆಯ ಮಗುವನ್ನು ಖುಷಿಯಿಂದ ಕಂಡು ಕುಣಿದಾಡಿದ ಮಗು, ಅದನ್ನು ಕಂಡು ಸ್ನೇಹದಿಂದ ಆಲಂಗಿಸಿದ ಕಂದಮಮ್ಮ… ಕೆಲವೇ ಕ್ಷಣಗಳ ಈ ವಿಡಿಯೋ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.