ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಜಿಲ್ಲೆಗೆ ಒಬ್ಬರು ಪೊಲೀಸ್ ಅಧೀಕ್ಷಕರು, ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ.
21 ಜಿಲ್ಲಾ ಘಟಕಗಳಿಗೆ ಎರಡು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದ ಅನ್ವಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಅವರಿಗೆ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗದ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. 21 ಜಿಲ್ಲಾ ಪೊಲೀಸ್ ಘಟಕಗಳಲ್ಲಿ ತಲಾ ಎರಡು ಎಎಸ್ಪಿ ಹುದ್ದೆಗಳನ್ನು ಸೃಜಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು 2 ಎಂದು ಹುದ್ದೆಗಳನ್ನು ವಿಂಗಡಿಸಲಾಗಿದ್ದು, ಅವರಿಗೆ ಕರ್ತವ್ಯ ಹಂಚಿಕೆ ಮಾಡಲಾಗಿದೆ.
ಎಎಸ್ಪಿ 1 ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ, ಬಂದೋಬಸ್ತ್, ಸಂಚಾರಕ್ಕೆ ಸಂಬಂಧಿಸಿದ ಎಲ್ಲಾ ಕರ್ತವ್ಯ ಸೇರಿ ಎಸ್.ಪಿ. ನಿರ್ದೇಶನದಂತೆ ಕಾರ್ಯನಿರ್ವಹಿಸುವುದು.
ಎಎಸ್ಪಿ 2 ಜಿಲ್ಲೆಯಲ್ಲಿ ಅಪರಾಧ, ನ್ಯಾಯಾಲಯಗಳ ವಿಚಾರಣೆ ನಿರ್ವಹಣೆ, ಡಿಎಆರ್ ಕೇಂದ್ರ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿಗೆ ಸಂಬಂಧಿಸಿದ ವಿವಿಧ ಕರ್ತವ್ಯ ನಿರ್ವಹಣೆ ಸೇರಿ ಎಸ್.ಪಿ. ನಿರ್ದೇಶನದಂತೆ ಕಾರ್ಯನಿರ್ವಹಿಸುವುದು.