ಬೆಂಗಳೂರು : ಕಳೆದ 3 ದಿನಗಳಿಂದ ನಡೆದಿದ್ದ ಬೆಂಗಳೂರು ಕಂಬಳಕ್ಕೆ ಅದ್ದೂರಿ ತೆರೆ ಬಿದ್ದಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಿಂದ ಬಂದಂತಹ ಲಕ್ಷಾಂತರ ಮಂದಿ ಬೆಂಗಳೂರು ಕಂಬಳ ಕಣ್ತುಂಬಿಕೊಂಡಿದ್ದಾರೆ.
ಕಾಂತಾರ’ ಚಿತ್ರದಲ್ಲಿ ಓಡಿದ್ದ ಕೋಣ ಚಿನ್ನದ ಪದಕ ಪಡೆದುಕೊಂಡಿತು. ಬೊಳಂಬಳ್ಳಿ ಪರಮೇಶ್ವರ್ ಭಟ್ಟ ಅವರ ಅಪ್ಪು ಕುಟ್ಟಿ 6.5 ಕೋಲು ನೀರು ಚಿಮ್ಮಿಸಿ ಕೆನೆಹಲಗೆ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದೆ. ಕಂಬಳದ ಕಣಹಲಗೆ ವಿಭಾಗದಲ್ಲಿ ಕಾಂತಾರ ಚಿತ್ರದಲ್ಲಿ ಬಳಸಿದ್ದ ಕೋಣಗಳು ಪದಕ ಗೆದ್ದಿವೆ. ಕಿಟ್ಟು-ಅಪ್ಪು ಹೆಸರಿನ ಕೋಣಗಳು ಗೆಲುವು ಸಾಧಿಸಿವೆ.
ಬೆಂಗಳೂರು ಕಂಬಳದ ಲಕ್ಕಿ ಡ್ರಾ ಕೂಪನ್ ವಿಜೇತರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಮೊದಲ ಬಹುಮಾನ ವಿಜೇತೆ ಪೂಜಾ ಎಂ.ವಿಗೆ ಮಾರುತಿ ಬ್ರಿಜಾ ಕಾರು ನೀಡಲಾಗಿದ್ದು, 2ನೇ ಬಹುಮಾನ ರಾಯಲ್ ಎನ್ಫೀಲ್ಡ್ ಬೈಕ್ ಗಿಫ್ಟ್ ಆಗಿ ನೀಡಲಾಗಿದೆ.
ವಿಜೇತರ ಸಂಪೂರ್ಣ ಪಟ್ಟಿ
1) ಕನೆಹಲಗೆ:
( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ “ಬಿ”
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್
ಅಡ್ಡ ಹಲಗೆ:
ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
3) ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ”
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್
ಮೊದಲ ಪ್ರಶಸ್ತಿ 16 ಗ್ರಾಂ ಚಿನ್ನ, 1 ಲಕ್ಷ ನೀಡಲಾಗಿದೆ. ಇನ್ನು, ಮಾಳ ಆನಂದ ನಿಲಯ ಶೇಖರ್ ಶೆಟ್ಟಿ ಮಾಲೀಕತ್ವದ ಕೋಣಗಳು 2ನೇ ಸ್ಥಾನ ಪಡೆದಿದ್ದು 8 ಗ್ರಾಂ ಚಿನ್ನ, 50 ಸಾವಿರ ನಗದು ಪ್ರಶಸ್ತಿ ನೀಡಲಾಗಿದೆ.
4) ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ”
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
5) ನೇಗಿಲು ಹಿರಿಯ:
ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ಓಡಿಸಿದವರು: ಸರಪಾಡಿ ಧನಂಜಯ ಗೌಡ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್
ನೇಗಿಲು ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ ಅವರ ಕೋಣಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ಸರಪಾಡಿ ಧನಂಜಯ ಗೌಡ ಎನ್ನುವರು ಕೋಣಗಳನ್ನು ಓಡಿಸಿದ್ದು, 16 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದ್ದಾರೆ.
6) ನೇಗಿಲು ಕಿರಿಯ:
ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ನೇಗಿಲು ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಎನ್ನುವ ಕೋಣಗಳು ಪ್ರಥಮ ಸ್ಥಾನ ಪಡೆದಿವೆ. ಪೆಂರ್ಗಾಲು ಕೃತಿಕ್ ಗೌಡ ಅವರು ಕೋಣಗಳನ್ನು ಓಡಿಸಿ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ಪಡೆದಿದ್ದಾರೆ.
ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 07 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 21 ಜೊತೆ
ನೇಗಿಲು ಹಿರಿಯ: 32 ಜೊತೆ
ಹಗ್ಗ ಕಿರಿಯ: 31 ಜೊತೆ
ನೇಗಿಲು ಕಿರಿಯ: 62 ಜೊತೆ
ಒಟ್ಟು ಕೋಣಗಳ ಸಂಖ್ಯೆ: 159