ಇಸ್ರೇಲ್ ಒಪ್ಪಂದದ ನಿಯಮಗಳಿಗೆ ಬದ್ಧವಾಗುವವರೆಗೆ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಬಿಡುಗಡೆಯಾಗಬೇಕಿದ್ದ ಒತ್ತೆಯಾಳುಗಳನ್ನು ಹಸ್ತಾಂತರಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಹಮಾಸ್ನ ಸಶಸ್ತ್ರ ವಿಭಾಗ ಶನಿವಾರ ತಿಳಿಸಿದೆ.
ಗಾಝಾ ಪಟ್ಟಿಯ ಉತ್ತರಕ್ಕೆ ಮಾನವೀಯ ನೆರವಿನ ಪ್ರವೇಶ ಮತ್ತು ಕೈದಿಗಳ ವಿಮೋಚನೆಗೆ ಆಯ್ಕೆ ಮಾನದಂಡಗಳು ಪ್ರಶ್ನಾರ್ಹ ವಿಷಯಗಳಾಗಿವೆ ಎಂದು ಎಝೆಡಿನ್ ಅಲ್-ಖಾಸ್ಸಾಮ್ ಬ್ರಿಗೇಡ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಒತ್ತೆಯಾಳುಗಳನ್ನು ಗಾಝಾ ಪಟ್ಟಿಯಲ್ಲಿರುವ ರೆಡ್ ಕ್ರಾಸ್ ಸಂಸ್ಥೆಗೆ ಇನ್ನೂ ಹಸ್ತಾಂತರಿಸಲಾಗಿಲ್ಲ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಎಎಫ್ ಪಿಗೆ ದೃಢಪಡಿಸಿದರು.