ಬೆಂಗಳೂರು: ಕಂಬಳ ಮತ್ತು ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಣ್ಣುಗಳು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಐತಿಹಾಸಿಕ ಕಂಬಳ ಉತ್ಸವದಲ್ಲಿ ಮಾತನಾಡಿದ ಅವರು ನಾನು ಮಂಗಳೂರಿನಲ್ಲಿದ್ದೇನೆಯೇ? ಬೆಂಗಳೂರಿನಲ್ಲಿದ್ದೇನೆಯೇ ಎಂಬುವ ಸಂಶಯ ಬಂತು ಎಂದು ತುಳು ಭಾಷೆಯಲ್ಲಿಯೇ ಮಾತನಾಡಿದ್ದಾರೆ.
ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆ ಮಾಡಬೇಕು. ಕಂಬಳ ಆಯೋಜನೆಯಲ್ಲಿ ಸಂಘಟಕರ ಶ್ರಮ ಬಹಳ ದೊಡ್ಡದು. ಐತಿಹಾಸಿಕ ಕಂಬಳ ಪರಸ್ಪರ ಎಲ್ಲರನ್ನೂ ಒಟ್ಟುಗೂಡಿಸಿದೆ. ಪ್ರತಿ ವರ್ಷ ಬೆಂಗಳೂರು ಕಂಬಳ ನಡೆಯುವಂತಾಗಲಿ ಎಂದು ಆಶಿಸಿದ್ದಾರೆ.
ಮನವಿ:
ತುಳುವನ್ನು ಹೆಚ್ಚುವರಿ ರಾಜ್ಯ ಭಾಷೆಯಾಗಿ ಸೇರ್ಪಡೆಗೊಳಿಸಬೇಕು ಎಂದು ವೇದಿಕೆ ಮೇಲೆ ಬೆಂಗಳೂರು ಕಂಬಳ ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.