ಬೆಂಗಳೂರು : ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಚುನಾವಣೆಗೂ ಮುನ್ನ ಬಂದಿರುವ ರೇಷನ್ ಕಾರ್ಡ್ ಅರ್ಜಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಹೌದು. ಬರೋಬ್ಬರಿ ಮೂರು ಲಕ್ಷ ಮಂದಿ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಪರಿಶೀಲನೆ ನಡೆಯುತ್ತಿದೆ. ಏಳು ಸಾವಿರ ಅರ್ಜಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಅರ್ಜಿ ವಿಲೇವರಿ ಆಗುವವರೆಗೂ ಹೊಸ ಅರ್ಜಿಗೆ ಅವಕಾಶ ಇರೋದಿಲ್ಲ ಎಂದು ಹೇಳಲಾಗುತ್ತಿದೆ.
ಅರ್ಜಿ ಸಲ್ಲಿಸಿದವರಿಗೆ ಶೀಘ್ರವೇ ಹೊಸ APL, BPL ಕಾರ್ಡ್ ವಿತರಿಸಲಾಗುತ್ತದೆ . ಹೊಸ ಪಡಿತರ ಚೀಟಿ ಕೋರಿ ಬಹುತೇಕ ಜನ ಅರ್ಜಿ ಸಲ್ಲಿಸಿದ್ದಾರೆ. ಇವುಗಳನ್ನು ಪರಿಶೀಲಿಸಿ ಅರ್ಹರಿಗೆ ಬಿಪಿಎಲ್, ಎಪಿಎಲ್ ಎಂಬುದಾಗಿ ಪತ್ಯೇಕವಾಗಿ ಕಾರ್ಡ್ ನೀಡಲಾಗುತ್ತದೆ ಎಂದು ಇತ್ತೀಚೆಗೆ ಸಚಿವ ಮುನಿಯಪ್ಪ ಹೇಳಿದ್ದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಂದ ಮೇಲೆ ಬಿಪಿಎಲ್ ಕಾರ್ಡ್ ಮಾಡಿಸಲು ಜನ ಮುಗಿ ಬಿದ್ದಿದ್ದಾರೆ.