ಬೆಂಗಳೂರು: ಬಿಹಾರದಲ್ಲಿ ಕುಳಿತು ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತ ಸಿಂಡಿಕೇಟ್ ನಡೆಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಖಿಲೇಶ್ ಕುಮಾರ್ ಸಿಂಗ್ ಬಂಧಿತ ಆರೋಪಿ. ಆರೋಪಿಯನ್ನು ವಿಶೇಷ ಕಾಯ್ದೆಯಡಿ ಬಂಧಿಸಲಾಗಿದೆ. 2018ರಿಂದಲು ವ್ಯವಸ್ಥಿತವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪಿ ಎಂದು ತಿಳಿದುಬಂದಿದೆ.
ಪಿಟ್ ಎನ್ ಡಿ ಪಿಎಸ್ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಡ್ರಗ್ಸ್ ದಂಧೆಗಾಗಿ 8 ಜನ ಬಿಹಾರ ಮೂಲದ ಹುಡುಗರನ್ನು ಆರೋಪಿ ನೇಮಿಸಿಕೊಂಡಿದ್ದ. ಅಲ್ಲದೇ ಅವರಿಗೆ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ನೀಡುತ್ತಿದ್ದ. ಬಿಹಾರದಿಂದ ಗಾಂಜಾ, ಎಂಡಿಎಂ ಗಳನ್ನು ಕಳುಹಿಸುತ್ತಿದ್ದ. ಹೀಗೆ ಬಂದ ಡ್ರಗ್ಸ್ ಗಳನ್ನು 8 ಜನರು ಜೊಮ್ಯಾಟೋ, ಸ್ವಿಗ್ಗಿ, ಡನ್ಜೋ ಸಮವಸ್ತ್ರ ಹಾಕಿಕೊಂಡು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.