ಕೋವಿಡ್ ಬಳಿಕ ಚೀನಾದಲ್ಲಿ ಇನ್ನೊಂದು ನಿಗೂಢ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಯ ಬೆಡ್ ಗಳು ಭರ್ತಿಯಾಗಿದೆ. ಹೌದು. ಬೀಜಿಂಗ್ ಮತ್ತು ನಿಯಾನ್ನಿಂಗ್ ಹಾಗೂ ಇತರೆ ಕೆಲ ಪ್ರಾಂತ್ಯದ ಶಾಲಾ ಮಕ್ಕಳಲ್ಲಿ ನಿಗೂಢ ಸ್ವರೂಪದ ನ್ಯುಮೋನಿಯಾ ಕಾಣಿಸಿಕೊಂಡಿದೆ.
ಕಳೆದ ಕೆಲ ದಿನಗಳಲ್ಲಿ ಈ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದ್ದು, , ಆಸ್ಪತ್ರೆಗೆ ಮಕ್ಕಳ ದಾಖಲಾತಿ ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಿದೆ. ಆಸ್ಪತ್ರೆಯ ಬೆಡ್ ಗಳು ಭರ್ತಿಯಾಗಿದೆ . ಪರಿಣಾಮ ಆಸ್ಪತ್ರೆಗಳು ಇನ್ನು ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಟ್ಟ ತಲುಪಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಶ್ವಾಸಕೋಶದ ಉರಿ ಸಮಸ್ಯೆ, ತೀವ್ರ ಪ್ರಮಾಣದ ಜ್ವರ, ಸಾಮಾನ್ಯ ಜ್ವರ, ಉಸಿರಾಟದ ತೊಂದರೆ ಇದರ ಲಕ್ಷಣಗಳಾಗಿದೆ.
ರಾಷ್ಟ್ರೀಯ ಆರೋಗ್ಯ ಆಯೋಗದ ಚೀನಾದ ಅಧಿಕಾರಿಗಳು ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ವರದಿ ಮಾಡಿದ್ದಾರೆ. ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಇನ್ಫ್ಲುಯೆನ್ಸ, ಮೈಕೋಪ್ಲಾಸ್ಮಾ ನ್ಯುಮೋನಿಯಾ (ಸಾಮಾನ್ಯವಾಗಿ ಕಿರಿಯ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ಬ್ಯಾಕ್ಟೀರಿಯಾದ ಸೋಂಕು), ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್ಎಸ್ವಿ) ಮತ್ತು ಸಾರ್ಸ್-ಕೋವ್-2 (ಕೋವಿಡ್-19 ಗೆ ಕಾರಣವಾಗುವ ವೈರಸ್) ನಂತಹ ರೋಗಕಾರಕಗಳ ಪ್ರಸರಣವು ಈ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.