ಬೆಂಗಳೂರು : ರಾಜ್ಯದ ಜನತೆಗೆ ಕೇಂದ್ರ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಇಂದಿನಿಂದ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಬೆಳಗಾವಿಗೆ ವಿಸ್ತರಿಸಿದ್ದು, ಇಂದು ಬೆಳಗಾವಿಗೆ ಮೊದಲ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.
ಕೆಎಸ್ ಆರ್ ನಿಲ್ದಾಣದಿಂದ ಬೆಳಗ್ಗೆ 5.45 ಕ್ಕೆ ಹೊರಡಲಿರುವ ವಂದೇ ಭಾರತ್ ಹುಬ್ಬಳಿಗೆ 10.50 ಕ್ಕೆ ತಲುಪಲಿದೆ. ಅಲ್ಲಿಂದ 1055 ಕ್ಕೆ ಹೊರಟು 11.20 ಕ್ಕೆ ಧಾರವಾಡ, ಮಧ್ಯಾಹ್ನ 1.30 ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿಯಿಂದ ಮಧ್ಯಾಹ್ನ 2 ಗಂಟೆಗೆ ವಾಪಸ್ ಹೊರಡಲಿದ್ದು, ಸಂಜೆ 4.15 ಕ್ಕೆ ಧಾರವಾಡ, 4.45 ಕ್ಕೆ ಹುಬ್ಬಳ್ಳಿ, ರಾತ್ರಿ 10.10 ಕ್ಕೆ ಬೆಂಗಳುರು ತಲುಪುವ ನಿರೀಕ್ಷೆಯಿದೆ.