
ಬಾಗಲಕೋಟೆಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ ಬಿಜೆಪಿಯ ಹಲವು ಮುಖಂಡರು ನಮ್ಮ ಸಂಪರ್ಕದಲ್ಲಿ ಇದ್ದಾರೆ ನಮ್ಮ ಪಕ್ಷದವರ ಸಹಮತವನ್ನು ಪಡೆದುಕೊಂಡು ಚರ್ಚೆ ಮಾಡ್ತೀವಿ. ಬಿಜೆಪಿಯಿಂದ ಬಂದವರಿಗೆ ಗೊಂದಲ ಹಾಗೂ ಅನ್ಯಾಯ ಆಗಬಾರದು ಎಂದರು.
ಈ ಬಗ್ಗೆ ಆಯಾ ಕ್ಷೇತ್ರದ ನಮ್ಮ ಮುಖಂಡರ ಜೊತೆ ಚರ್ಚಿಸುತ್ತೇವೆ. ಸ್ವಇಚ್ಛೆಯಿಂದ ಬರುವವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು.

