alex Certify BIG BREAKING NEWS: ಆರ್. ಅಶೋಕ್ ಗೆ ಒಲಿದ ವಿಪಕ್ಷ ನಾಯಕನ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಆರ್. ಅಶೋಕ್ ಗೆ ಒಲಿದ ವಿಪಕ್ಷ ನಾಯಕನ ಸ್ಥಾನ

ಬೆಂಗಳೂರು: ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್. ಅಶೋಕ ಆಯ್ಕೆ ಮಾಡಲಾಗಿದೆ.

ಪದ್ಮನಾಭನಗರದ ಶಾಸಕರಾಗಿರುವ ಅಶೋಕ್ ಅವರು 7 ಬಾರಿ ಶಾಸಕರಾಗಿದ್ದಾರೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಸಚಿವರಾಗಿ, ಉಪಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಒಕ್ಕಲಿಗ ನಾಯಕತ್ವಕ್ಕೆ ಮಣೆ ಹಾಕಿದ್ದು, ಆರ್. ಅಶೋಕ್ ಅವರಿಗೆ ವಿಪಕ್ಷ ನಾಯಕನಾಗಿ ಆಯ್ಕೆ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆದಿದ್ದು, ವೀಕ್ಷಕರಾದ ನಿರ್ಮಲಾ ಸೀತಾರಾಮನ್, ದುಶ್ಯಂತಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಮೊದಲಾದವರು ಭಾಗವಹಿಸಿದ್ದರು.

ಅಶೋಕ ನಡೆದು ಬಂದ ಹಾದಿ

10ನೇ ವಯಸ್ಸಿನಲ್ಲಿಯೇ ಆರ್.ಎಸ್.ಎಸ್. ಸೇರ್ಪಡೆಯಾಗಿದ್ದ ಅವರು 1975 77ರಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದ್ದರು. ವೇಳೆ ಎಲ್.ಕೆ. ಅಡ್ವಾಣಿಯೊಂದಿಗೆ ಬೆಂಗಳೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದರು.

1995ರಲ್ಲಿ ಬಿಜೆಪಿ ಬೆಂಗಳೂರು ನಗರ ಅಧ್ಯಕ್ಷರಾಗಿ ನೇಮಕವಾಗಿ 1997 ರಲ್ಲಿ ವಿಧಾನಸಭೆಗೆ ಪ್ರವೇಶಿಸಿದರು. ಉಪಚುನಾವಣೆಯಲ್ಲಿ ಉತ್ತರಹಳ್ಳಿಯಲ್ಲಿ ಗೆಲುವು ಸಾಧಿಸಿದ ಅವರು 1999 ಮತ್ತು 2004ರಲ್ಲಿ ಸತತ ಎರಡು ಬಾರಿ ಸೇರಿ ಒಟ್ಟು ಮೂರು ಬಾರಿ ಉತ್ತರಹಳ್ಳಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಪದ್ಮನಾಭನಗರದಿಂದ ಸ್ಪರ್ಧೆ ಮಾಡಿದ ಅವರು ಪದ್ಮನಾಭನಗರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ.

2006-07 ರಲ್ಲಿ ಮೊದಲ ಬಾರಿಗೆ ಬಿಜೆಪಿ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು ಮಡಿಲು ಕಿಟ್ ಎಂಬ ನೂತನ ಯೋಜನೆ ಅನುಷ್ಠಾನಗೊಳಿಸಿದರು.

2008-10ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಸಾರಿಗೆ, ಆಹಾರ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

2010 -12ರಲ್ಲಿ ಸಾರಿಗೆ ಗೃಹ ಸಚಿವರಾಗಿ, 2012 -13ರಲ್ಲಿ ಜಗದೀಶ ಶೆಟ್ಟರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದಾರೆ. 2019 -21 ರಲ್ಲಿ ಕಂದಾಯ ಸಚಿವರಾಗಿ ಕೆಲಸ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...