Exclusive: ಬಾಡಿಕ್ಯಾಮ್ ನಲ್ಲಿ ಸೆರೆಯಾಗಿತ್ತು ಮೊದಲ ಹಮಾಸ್ ದಾಳಿಯ ಭೀಕರ ಕ್ಷಣ

ಇಸ್ರೇಲ್ ಮತ್ತು ಹಮಾಸ್‌ ಮಧ್ಯೆ ಯದ್ಧ ನಡೆಯುತ್ತಿದೆ. ಈ ಮಧ್ಯೆ ಇಸ್ರೇಲ್‌ ರಕ್ಷಣಾ ಪಡೆಗಳು  ದಾಳಿಯ ವೀಡಿಯೊ ಒಂದನ್ನು ಬಿಡುಗಡೆ ಮಾಡಿವೆ. ಗಾಜಾದ ಪೂರ್ವ ಗಡಿಯಿಂದ ಪ್ರಾರಂಭಿಸಲಾದ ಹಮಾಸ್ ಕಾರ್ಯಾಚರಣೆಯ ಒಂದು ವಿಡಿಯೋ ಇದಾಗಿದೆ. ದಾಳಿಯಲ್ಲಿ ಭಾಗವಹಿಸಿದ್ದ ಭಯೋತ್ಪಾದಕರೊಬ್ಬರ ಬಾಡಿಕ್ಯಾಮ್‌ನಿಂದ ವಿಡಿಯೋ ಮಾಡಲಾಗಿದೆ. ಹಮಾಸ್‌ನ ಕ್ರೂರ ದಾಳಿಗೆ 1,200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಈ ವಿಡಿಯೋ ಅಕ್ಟೋಬರ್ 7 ರಂದು ನಡೆದ ದಾಳಿಯದ್ದು. ಅಂದು  ಏನಾಯಿತು ಎಂಬುದರ ನೈಜತೆಯನ್ನು ತೋರಿಸಲು ಇಸ್ರೇಲ್‌ ಅಧಿಕಾರಿಗಳು ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

Footage provided to CNN by the IDF shows a tunnel in Gaza.

ಗಾಜಾದ ಪೂರ್ವದ ಅಂಚಿನಲ್ಲಿ  ಅಕ್ಟೋಬರ್ 7 ರ ಬೆಳಗಿನ ಜಾವ ನಡೆದ ದಾಳಿಯ ವಿಡಿಯೋ ಇದು.  ಹಮಾಸ್ ಉಗ್ರಗಾಮಿಗಳ ಗುಂಪು ಅಲ್ಲಿ ಕಾಯುತ್ತಿರುವುದನ್ನು ನೋಡ್ಬಹುದು. ಕೆಲವರು ಬಿಳಿ ಪಿಕಪ್ ಟ್ರಕ್‌ ಏರಿದ್ರೆ ಇತರರು ಮೋಟರ್‌ಬೈಕ್‌ಗಳಲ್ಲಿ ಹೋಗ್ತಿದ್ದಾರೆ. ಅವರು ಹೋದಲ್ಲೆಲ್ಲ ವೀಡಿಯೊ ರೆಕಾರ್ಡ್ ಆಗಿದೆ. ನೀವು ವಿಡಿಯೋದಲ್ಲಿ  ಶಸ್ತ್ರಾಸ್ತ್ರಗಳು ಸಿದ್ಧವಾಗಿವೆಯೇ ಎಂದು ಅವರು ಖಚಿತಪಡಿಸಿಕೊಳ್ಳುತ್ತಿರುವುದನ್ನು ನೀವು ನೋಡ್ಬಹುದು. ಗಡಿಯ ಕಡೆ ಓಡ್ತಿರುವ ಅವರು ಅಲ್ಲಾಹು ಅಕ್ಬರ್‌, ಗಾಡ್‌ ಈಸ್‌ ಗ್ರೇಟ್‌ ಎಂದು ಕೂಗ್ತಿರೋದನ್ನು ನೀವು ನೋಡ್ಬಹುದು.

ದಾಳಿಯ ವೀಡಿಯೋ 100 ನಿಮಿಷಗಳದ್ದಾಗಿದೆ.  ದಾಳಿಯ ಮೊದಲು ಪ್ರಾರಂಭವಾಗಿ ಕ್ಯಾಮರಾ ನಿಲ್ಲುವವರೆಗೂ ರೆಕಾರ್ಡ್‌ ಮುಂದುವರಿಯುತ್ತದೆ. ಈ ವಿಡಿಯೋ ನೋಡಿದ್ರೆ ಅವರು ಮೊದಲೇ ಪ್ಲಾನ್‌ ಮಾಡಿ ದಾಳಿ ಶುರು ಮಾಡಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಸುರಂಗಗಳಲ್ಲಿ ಆಯುಧಗಳನ್ನು ಇಟ್ಟಿರೋದನ್ನು ನೀವು ಈ ವಿಡಿಯೋದಲ್ಲಿ ನೋಡ್ಬಹುದು. ಎರಡು ಗಡಿ ಬೇಲಿ ದಾಟಿ ಇಸ್ರೇಲ್‌ ಪ್ರವೇಶ ಮಾಡುವ ಇವರಲ್ಲಿ ಕೆಲವರ ಬಳಿ  AK-47 ನಂತಹ ರೈಫಲ್‌ ಇದ್ರೆ ಮತ್ತೆ ಕೆಲವರ ಕೈನಲ್ಲಿ ರಾಕೆಟ್ ಚಾಲಿತ ಗ್ರೆನೇಡ್‌ ಇರೋದನ್ನು ನೋಡ್ಬಹುದು.

02 hamas bodycam footage IDF released liebermann

ವಿಡಿಯೋ ಕೊನೆಯಲ್ಲಿ ಈ ವ್ಯಕ್ತಿ ಮಿಲಿಟರಿ ನೆಲೆಯನ್ನು ಸಮೀಪಿಸೋದನ್ನು ನೋಡ್ಬಹುದು. ಅಲ್ಲಿ ಇಸ್ರೇಲ್‌ ಸೈನಿಕರು ಹಾಗೂ ಇವರ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತದೆ. ಕ್ಯಾಮರಾ ಹೊಂದಿದ್ದ ವ್ಯಕ್ತಿ ನೋವಿನಿಂದ ನರಳೋದನ್ನು ಕೇಳ್ಬಹುದು. ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಅಸ್ಪಷ್ಟವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read