ಬೆಂಗಳೂರು: ಕೆಎಸ್‌ಆರ್‌ಟಿಸಿ ಆದಾಯ ಹೆಚ್ಚಿಸಲು 20 ಲಾರಿ ಟ್ರಕ್‌ಗಳನ್ನು ಖರೀದಿಸಲಾಗಿದೆ. ಇನ್ನು ನಾಲ್ಕು ವರ್ಷಗಳಲ್ಲಿ 4,000 ಬಸ್‌ಗಳಲ್ಲಿ ಪಾರ್ಸೆಲ್ ಸಾಗಾಟ ಮಾಡುವ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ.
ವಿಮಾನ ನಿಲ್ದಾಣ, ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ , ತಲುಪಿಸಬೇಕಾದ ಸ್ಥಳಕ್ಕೆ ನಮ್ಮ ಟ್ರಕ್‌ಗಳು ಪಾರ್ಸೆಲ್ ಒಯ್ಯಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
KSRTC ಯು ಹಾಲಿ ತನ್ನ 800 ಬಸ್‌ಗಳಲ್ಲಿ ಪಾರ್ಸೆಲ್ ಸೇವೆ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 4000 ಬಸ್‌ಗೆ ವಿಸ್ತರಣೆ ಮಾಡುವ ಗುರಿ ಇಟ್ಟುಕೊಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ 20 ಟ್ರಕ್‌ಗಳನ್ನು ಪಾರ್ಸೆಲ್ ಸೇವೆಗೆ ಡಿಸೆಂಬರ್ 15ರಂದು ನಿಯೋಜಿಸಲಿದೆ.