ಬೆಂಗಳೂರು : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆರ್.ಆರ್. ನಗರ ಪೊಲೀಸ್ ಠಾಣೆಗೆ ಇಂದು ಹಾಜರಾಗಿದ್ದಾರೆ.
ಕಾರಣಾಂತರಗಳಿಂದ ನಟ ದರ್ಶನ್ ವಿಚಾರಣೆಗೆ ಬಂದಿರಲಿಲ್ಲ, ಇದೀಗ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ.
ದರ್ಶನ್ ನಿವಾಸದ ಬಳಿ ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ನೀಡಿದ ಮೂರು ದಿನಗಳೊಳಗೆ ಸಿಸಿ ಟಿವಿ ಫೂಟೇಜ್ ಸಹಿತ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದ್ದು, ಅಂತೆಯೇ ಇಂದು ಆರ್.ಆರ್.ನಗರ ಠಾಣೆಗೆ ಹಾಜರಾಗಿ ದರ್ಶನ್ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.