ಭಾರತದಲ್ಲಿರುವ ಪ್ರಸಿದ್ಧ ಎಲೆಕ್ಟ್ರಿಕ್ ಸ್ಕೂಟರ್ಗಳ ಸಾಲಿನಲ್ಲಿ ಆಥೆರ್ ಇ ಸ್ಕೂಟರ್ ಸಹ ಒಂದು. ಈ ಆಥೆರ್ ಎನರ್ಜಿಯು ತನ್ನ ಶ್ರೇಣಿಯ ಹೊಸ ಮಾದರಿಯ ಬೈಕ್ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಇದು ಆಥರ್ ಇ ಸ್ಕೂಟರ್ಗಳ ಎರಡನೆ ಸರಣಿ ಎಂದು ಹೇಳಲಾಗುತ್ತಿದೆ. ಅಥೆರ್ ಎನರ್ಜಿ ಸಿಇಓ ತರುಣ್ ಮೆಹ್ತಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಸ್ಕೂಟರ್ಗಳು ಹಳೆಯ ಮಾದರಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ.
ಅಥರ್ ಸರಣಿ 2 ಪ್ರಸ್ತುತ 450 ಲೈನ್‌ಅಪ್‌ನಲ್ಲಿರುವ ಅದೇ ಮೋಟಾರ್, ಹಾರ್ಡ್‌ವೇರ್, ವಿನ್ಯಾಸ, ಬ್ಯಾಟರಿ ಮತ್ತು ವೈಶಿಷ್ಟ್ಯಗಳನ್ನು ಬಳಸುತ್ತದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಅಥರ್‌ನ ಪ್ರಸ್ತುತ 450S, 450X (2.9kWh) ಮತ್ತು 450X (3.7kWh) ಅನ್ನು ಒಳಗೊಂಡಿದೆ. S ಟ್ರಿಮ್ ಬ್ರ್ಯಾಂಡ್‌ನ ಪೋರ್ಟ್‌ಫೋಲಿಯೊದಲ್ಲಿ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ
ಇದೀಗ ಅಥೆರ್ ತನ್ನ ಎರಡನೇ ಸರಣಿಯನ್ನು ಆರಂಭಿಸುವ ತಯಾರಿಯಲ್ಲಿದೆ. ಆದರೆ ಅಥೆರ್ ಇತ್ತೀಚೆಗಷ್ಟೇ 450 ಎಸ್ನ್ನು ಆರಂಭಿಸಿದ್ದು ಹೀಗಾಗಿ ಮಾರುಕಟ್ಟೆಯಲ್ಲಿ ಹೊಸ ಸರಣಿಯ ಅಥೆರ್ ಬೈಕ್ಗಳ ಜೊತೆಯಲ್ಲಿ 450 ಎಸ್ ಶ್ರೇಣಿ ಸಹ ಇರಲಿದೆ. ಆದರೆ ಅಥೆರ್ ಸ್ಕೂಟರ್ಗಳ ಈ ಎರಡನೇ ಸರಣಿಯು ಯಾವಾಗ ಲಾಂಚ್ ಆಗುತ್ತೆ ಅಂತಾ ಇನ್ನೂ ಕಂಪನಿಯು ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಈ ಹೊಸ ಮಾದರಿಯ ಅಥೆರ್ ಸ್ಕೂಟರ್ಗಳು ಪಾರದರ್ಶಕ ಬಾಡಿ ಸಿಸ್ಟಂ ಹೊಂದಿರುತ್ತದೆ ಎನ್ನಲಾಗಿದೆ.