ಬೆಂಗಳೂರು: ದೀಪಾವಳಿ ಹಬ್ಬದಲ್ಲಿಯೂ ಈರುಳ್ಳಿ ದರ ಕಡಿಮೆಯಾಗಿಲ್ಲ. ಯಶವಂತಪುರ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗದೆ ತಟಸ್ಥವಾಗಿದೆ. ಗುಣಮಟ್ಟದ ಈರುಳ್ಳಿ ದರ ಚಿಲ್ಲರೆ ಮಾರುಕಟ್ಟೆಯಲ್ಲಿ 70ರಿಂದ 80 ರೂಪಾಯಿವರೆಗೂ ಮಾರಾಟವಾಗುತ್ತಿದೆ.
ಮಹಾರಾಷ್ಟ್ರ ಭಾಗದಿಂದ ಹಳೆ ದಾಸ್ತಾನು ಈರುಳ್ಳಿ ಪೂರೈಕೆಯಾಗುತ್ತಿದೆ. ದೊಡ್ಡ ಗಾತ್ರದ ಈರುಳ್ಳಿ ಕ್ವಿಂಟಾಲ್ ಗೆ 4,500 ನಿಂದ 4,700 ರೂ., ಮಧ್ಯಮ ಗಾತ್ರದ ಈರುಳ್ಳಿ 4200 ರೂ.ನಿಂದ 4,400 ರೂ. ಹಾಗೂ ಸಣ್ಣ ಈರುಳ್ಳಿ 3800 ನಿಂದ 4000 ರೂ. ವರೆಗೆ ಮಾರಾಟವಾಗುತ್ತಿದೆ. ಹೊಸ ಈರುಳ್ಳಿಗೂ ಬೇಡಿಕೆ ಇದೆ.
ಮುಂಗಾರು ಮಳೆ ಕೊರತೆ ಮೊದಲಾದ ಕಾರಣಗಳಿಂದ ಬೇಡಿಕೆಯಷ್ಟು ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗಳಲ್ಲಿ ದರ ಹೆಚ್ಚಳವಾಗಿದೆ. ಹೆಚ್ಚು ದಿನ ಇಡಬಹುದಾದ ಈರುಳ್ಳಿ ದರ ಏರುಗತಿಯಲ್ಲೇ ಇದ್ದು, ಹೊಸ ಈರುಳ್ಳಿ ದರ ಇದಕ್ಕಿಂತ ಕಡಿಮೆ ಇದೆ.