ನವದೆಹಲಿ: ಮಾದಕ ಬೆಡಗಿ, ನಟಿ ಸನ್ನಿ ಲಿಯೋನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮನೆ ಕೆಲಸದಾಕೆಯ ಒಂಬತ್ತು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಸನ್ನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನುಷ್ಕಾ ಕಿರಣ್ ಮೋರೆ ಅವರ ಫೋಟೋ ಮತ್ತು ಇತರ ವಿವರಗಳನ್ನು ಹಂಚಿಕೊಂಡಿದ್ದಾರೆ.
ಮುಂಬೈ ಪೊಲೀಸರು ಮತ್ತು ಬಿಎಂಸಿಯ ಅಧಿಕೃತ ಖಾತೆಗಳನ್ನು ಟ್ಯಾಗ್ ಮಾಡಿದ ಸನ್ನಿ, ಜೋಗೇಶ್ವರಿ ಪಶ್ಚಿಮದ ಬೆಹ್ರಾಮ್ ಬಾಗ್ನಿಂದ ಅನುಷ್ಕಾ ಗುರುವಾರ ಸಂಜೆಯಿಂದ ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಅನುಷ್ಕಾ ಸುರಕ್ಷಿತವಾಗಿ ಮನೆಗೆ ಬಂದರೆ, ಅವಳನ್ನು ಹುಡುಕಿ ಕೊಟ್ಟವರಿಗೆ 50,000 ರೂ.ಗಳ ಬಹುಮಾನವನ್ನು ನೀಡುವುದಾಗಿ ಹೇಳಿದ್ದಾರೆ. ಮುಂಬೈವೊಂದರಲ್ಲೇ ಮುನ್ನೂರಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿರುವ ಪ್ರಕರಣವೂ ದಾಖಲಾಗಿದೆ.