ನವದೆಹಲಿ: ಭಾರತದ ಐದರಲ್ಲಿ ಇಬ್ಬರು ಗ್ರಾಹಕರು ಈ ಹಬ್ಬದ ಋತುವಿನಲ್ಲಿ ಡೈರೆಕ್ಟ್-ಟು-ಕನ್ಸ್ಯೂಮರ್ (ಡಿ2ಸಿ) ವ್ಯಾಪಾರಿಗಳಿಂದ ಆನ್ಲೈನ್ನಲ್ಲಿ ಶಾಪಿಂಗ್ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಈ ಹಬ್ಬದ ಋತುವಿನಲ್ಲಿ ಶೇ.41 ರಷ್ಟು ಗ್ರಾಹಕರು ಆನ್ಲೈನ್ ಶಾಪಿಂಗ್ ಯೋಜನೆಗಳನ್ನು ಹೊಂದಿದ್ದಾರೆ ಎಂದು ವರದಿಯು ಕಂಡುಕೊಂಡಿದೆ.
ಶೇ.33 ರಷ್ಟು ಜನರು ಫ್ಯಾಷನ್ ಮತ್ತು ಪರಿಕರಗಳನ್ನು ಖರೀದಿಸಲು ಯೋಜಿಸಿದ್ದರೆ, ಶೇ. 23 ರಷ್ಟು ಪ್ರಯಾಣಕ್ಕಾಗಿ, ಶೇ. 11 ರಷ್ಟು ವೈಯಕ್ತಿಕ ಆರೈಕೆಗಾಗಿ ಬಳಸುತ್ತಾರೆ ಎನ್ನಲಾಗಿದೆ.
ಸುಮಾರು ಶೇ. 70 ರಷ್ಟು ಡೈರೆಕ್ಟ್-ಟು-ಕನ್ಸ್ಯೂಮರ್ ವ್ಯಾಪಾರಿಗಳು ಹಬ್ಬದ ಋತುವಿನಲ್ಲಿ ಮಾರಾಟದಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ.
ವ್ಯಾಪಾರಿಗಳು ಗಣನೀಯವಾಗಿ ಉತ್ಪಾದನೆ ಮತ್ತು ಉಗ್ರಾಣದ ಸಾಮರ್ಥ್ಯಗಳನ್ನು ಸೇರಿಸುತ್ತಿದ್ದಾರೆ. ಜೊತೆಗೆ ಮಾನವಶಕ್ತಿಯನ್ನು ಹೆಚ್ಚಿಸುವುದು ಮತ್ತು ಮಾರ್ಕೆಟಿಂಗ್ಗೆ ಖರ್ಚು ಮಾಡುತ್ತಾರೆ ಎಂದು ವರದಿ ಉಲ್ಲೇಖಿಸಿದೆ.