ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಜಗತ್ತನ್ನು ಸುತ್ತಲು ಬಯಸುತ್ತಾರೆ. ಹಣದ ಸಮಸ್ಯೆ ಅಥವಾ ಇನ್ನಿತರೆ ಸಮಸ್ಯೆಗಳಿಂದ ಅದು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ತಮ್ಮ ಜಗತ್ತು ಸುತ್ತುವ ಆಸೆಯನ್ನು ಪೂರೈಸಿಕೊಳ್ಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ಇಡೀ ಜಗತ್ತನ್ನು ಒಂದು ಬಾರಿಯಲ್ಲ ಎರಡು ಬಾರಿ ಪ್ರಯಾಣಿಸಿದ್ದಾನೆ.
ಹೌದು, ಈ ವ್ಯಕ್ತಿ ಹೆಸರು ಗುನ್ನಾರ್ ಗಾರ್ಫೋರ್ಸ್ ಎಂದು. ಎರಿಟ್ರಿಯಾದಂತಹ ಯುದ್ಧ-ಹಾನಿಗೊಳಗಾದ ಪ್ರದೇಶಗಳನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ ಪ್ರತಿಯೊಂದು ದೇಶಕ್ಕೂ ಪ್ರಯಾಣಿಸಿದ್ದಾನೆ. ಮಾರ್ಷಲ್ ದ್ವೀಪಗಳಲ್ಲಿ ಸ್ನಾರ್ಕೆಲಿಂಗ್‌ಗೆ ಹೋಗುವುದರಿಂದ ಹಿಡಿದು ಬೋಟ್ಸ್‌ವಾನಾದಲ್ಲಿ ಸಿಂಹಗಳನ್ನು ನೋಡುವವರೆಗೆ, ಟೋಕಿಯೊದಲ್ಲಿ ಬೆಳಗಿನ ಉಪಾಹಾರಕ್ಕಾಗಿ ಸುಶಿ ತಿನ್ನುವವರೆಗೆ ಎಲ್ಲವನ್ನೂ ಅನುಭವಿಸಿದ್ದಾನೆ.
ಗುನ್ನಾರ್, ಪ್ರಪಂಚದ ಪ್ರತಿಯೊಂದು ದೇಶವನ್ನು ಎರಡು ಬಾರಿ ಅನ್ವೇಷಿಸಿದ ಮೊದಲ ವ್ಯಕ್ತಿ. ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾನೆ. ಯಾವ ರಾಷ್ಟ್ರ ಹೆಚ್ಚು ನಿರಾಶಾದಾಯಕವಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
48 ವರ್ಷದ ನಾರ್ವೇಯನ್ ವ್ಯಕ್ತಿಯಾಗಿರುವ ಗುನ್ನಾರ್ 2008 ರಿಂದ 2013 ರ ವರೆಗಿನ ತನ್ನ ಆರಂಭಿಕ ಪ್ರಯಾಣಕ್ಕೆ ಹಣ ಹೊಂದಿಸಲು ಪ್ರಸಾರ ಪತ್ರಕರ್ತನಾಗಿ ಕೆಲಸ ಶುರು ಮಾಡಿದ. ವಿವಿಧ ದೇಶಗಳಿಗೆ ಭೇಟಿ ನೀಡುವ ಸಲುವಾಗಿ ಅವನು ತನ್ನ ಮನೆಯನ್ನು ತೊರೆದನು.
ಅಂದಹಾಗೆ, ನಿರಾಶಾದಾಯ ದೇಶ ಯಾವುದು ಎಂಬುದನ್ನು ಗುನ್ನಾರ್ ಹಂಚಿಕೊಂಡಿದ್ದಾನೆ. ಉತ್ತರ ಕೊರಿಯಾ ಭೇಟಿ ತನ್ನನ್ನು ನಿಜಕ್ಕೂ ಗೊಂದಲಕ್ಕೀಡು ಮಾಡಿತು ಎಂದು ಹೇಳಿದ್ದಾನೆ. ನೀವು ಬೇಕಿದ್ದರೆ, ಆ ದೇಶಕ್ಕೆ ಭೇಟಿ ನೀಡಿ. ಅದು ತುಂಬಾ ಕೆಟ್ಟದಾಗಿದೆ. ನಕಾರಾತ್ಮಕ ಕಾರಣಗಳಿಗಾಗಿ ಉತ್ತರ ಕೊರಿಯಾದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಗುನ್ನಾರ್ ಹೇಳಿದ್ದಾನೆ.
ಉತ್ತರ ಕೊರಿಯಾವನ್ನು ಸೌದಿ ಅರೇಬಿಯಾದೊಂದಿಗೆ ಹೋಲಿಸಿದ ಗುನ್ನಾರ್, ಸೌದಿ ಎಷ್ಟೋ ಆರಾಮದಾಯಕವಾಗಿದೆ. ಈ ದೇಶಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾನೆ. ಅಲ್ಲದೆ, ನ್ಯೂಜಿಲೆಂಡ್, ಮಧ್ಯ ಏಷ್ಯಾ, ಕೆನಡಾ ಮತ್ತು ಐಸ್ಲ್ಯಾಂಡ್ ಸೇರಿದಂತೆ ಹಲವಾರು ವರ್ಷಗಳ ಕಾಲ ವಾಸಿಸಲು ಮನಸ್ಸಿಲ್ಲದ ಕೆಲವು ದೇಶಗಳಿವೆ ಎಂದು ಗುನ್ನಾರ್ ಹಂಚಿಕೊಂಡಿದ್ದಾರೆ. ಜಪಾನ್ ಮತ್ತು ಮಡಗಾಸ್ಕರ್ ನಿಜವಾಗಿಯೂ ಅದ್ಭುತವಾಗಿದೆ. ಸಾವೊ ಟೋಮ್ ಕೆಟ್ಟದಾಗಿಲ್ಲ. ಆದರೆ ಇಲ್ಲಿನ ರಸ್ತೆಗಳು ಭೀಕರವಾಗಿವೆ ಎಂದು ಹೇಳಿದ್ದಾನೆ.
ಪಾಕಿಸ್ತಾನ, ಕಝಾಕಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನ್ ದೇಶಗಳಿಗೆ ಪ್ರಯಾಣಿಸಲು ಗುನ್ನಾರ್ ಸ್ವತಃ ಸವಾಲನ್ನು ಹಾಕಿಕೊಂಡಿದ್ದಾನಂತೆ.