ವಿವಾಹಿತೆಯ ಪ್ರೇಮಪಾಶಕ್ಕೆ ಸಿಲುಕಿದ್ದ ನಿವೃತ್ತ ಯೋಧ; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶಂಕೆ

ಮಡಿಕೇರಿ: ನಿವೃತ್ತ ಯೋಧರೊಬ್ಬರು ವಿವಾಹಿತ ಮಹಿಳೆಯ ಪೇಮಪಾಶಕ್ಕೆ ಸಿಲುಕಿ ಹನಿಟ್ರ್ಯಾಪ್ ಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಉಕ್ಕಡ ನಿವಾಸಿ ಸಂದೇಶ್ ನಿವೃತ್ತ ಯೋಧ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೇಶ್ ಒಂದು ತಿಂಗಳ ಹಿಂದೆ ನಿವೃತ್ತಿಯಾಗಿದ್ದರು. ಸಂದೇಶ್ ಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಮಡಿಕೇರಿಯ ವಿವಾಹಿತ ಮಹಿಳೆ ಕಿರುಕುಳ ನೀಡಿದ್ದಾಳಂತೆ. ಆಕೆಯ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ್ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ.

ಸಂದೇಶ್ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂದೇಶ್ ಗಾಗಿ ಹುಡುಕಾಡಿದ್ದಾರೆ. ಸಂದೇಶ್ ಮನೆಯ ಸಮೀಪದ ಪಂಪಿನ ಕೆರೆಯ ಬಳಿ ಅವರ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿದ್ದು, ಸಂದೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧ ಕಾರ್ಯ ನಡೆದಿದೆ.

ವಿವಾಹಿತ ಮಹಿಳೆಯೊಬ್ಬರು ಸಂದೇಶ್ ಅವರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಳಂತೆ. ಆಕೆಯ ತಾಯಿ, ತಂಗಿ ಸೇರಿ ತನ್ನನ್ನು ಹನಿಟ್ರ್ಯಾಪ್ ಗೆ ಬೀಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನನ್ನ ಒಂದು ಕಾರು ಹಾಗೂ ಕೆಲ ದಾಖಲೆಗಳು ಆಕೆಯ ಮನೆಯಲ್ಲಿದೆ. ನನ್ನ ಸಾವಿಗೆ ಮಹಿಳೆ, ಆಕೆಯ ತಾಯಿ, ತಂಗಿ ಕಾರಣ ಎಂದು ಬರೆದಿದ್ದಾರೆ. ಅಲ್ಲದೇ ರೆಸಾರ್ಟ್ ಒಂದರ ಮಾಲೀಕ, ಓರ್ವ ಪೊಲೀಸ್ ಸಿಬ್ಬಂದಿ ಇನ್ನಿಬ್ಬರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read