ಬೀದಿಬದಿ ವ್ಯಾಪಾರಿಗಳೇ ಗಮನಿಸಿ : ಗುರುತಿನ ಚೀಟಿಗಾಗಿ ಅರ್ಜಿ ಆಹ್ವಾನ

ದೀನ್ ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ 2023-24ನೇ ಸಾಲಿನ ಸ್ವಯಂ ಉದ್ಯೋಗದ ವ್ಯಕ್ತಿಗತ ಉದ್ಯಮಶೀಲತೆ (ಸಾಲ ಮತ್ತು ಸಹಾಯಧನ) ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಂಘ ಹಾಗೂ ಬೀದಿಬದಿ ವ್ಯಾಪರಸ್ಥರು ಗುರುತಿನ ಚೀಟಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಕೈಗೊಳ್ಳುವ ಆಸಕ್ತಿ ಇರುವ ಸ್ವ-ಸಹಾಯ ಗುಂಪಿನಲ್ಲಿ ಸದಸ್ಯರಿರುವ ಕುಟುಂಬದ ಅರ್ಹ ಫಲಾನುಭವಿಗಳಿಂದ ಗುಂಪು ಉದ್ದಿಮೆ ಶೀಲತೆ (ಸಾಲ ಮತ್ತು ಸಹಾಯಧನ) ಚಟುವಟಿಕೆಗಳ ಅಡಿ ಸ್ವಯಂ ಉದ್ಯೋಗ ಕೈಗೊಳ್ಳುವ ಮಹಿಳಾ ಸ್ವ-ಸಹಾಯ ಗುಂಪು ಹಾಗೂ ಪ್ರದೇಶ ಮಟ್ಟದ ಒಕ್ಕೂಟವನ್ನು ರಚಿಸಲು ಆಸಕ್ತಿ ಹೊಂದಿದ ಅರ್ಹ ಫಲಾನುಭವಿಗಳು ಅಥವಾ ಗುಂಪುಗಳು ಮತ್ತು ಬೀದಿಬದಿ ವ್ಯಾಪಾರಿಗಳು ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಕುಡುತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಯಾಗಿದ್ದು, ಬಡತನ ರೇಖೆ ಕೆಳಗಿನ ಕುಟುಂಬದವರಾಗಿರಬೇಕು. ರೇಷನ್ ಕಾರ್ಡ್, ಆಧಾರ್‍ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಎರಡು ಭಾವಚಿತ್ರಗಳು, ಸ್ವಯಂಉದ್ಯೋಗದ ಬಗ್ಗೆ ಭಾವಚಿತ್ರ, ಗುಂಪಿಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್, ಅಂಗವಿಕಲರಿದ್ದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 27 ಕೊನೆಯ ದಿನವಾಗಿರುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read