ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಎಂದು ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಕಾರ್ಯಪಾಲಕ ಇಂಜಿನಿಯರ್ ಓರ್ವರಿಗೆ ಕರೆ ಮಾಡಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಂಜಿನಿಯರ್ ರಾಮದಾಸಪ್ಪ ಅವರಿಗೆ ಕರೆ ಮಾಡಿದ್ದ ಆರೋಪಿ, ಮೊದಲಿಗೆ ತಾನು ಲೋಕಾಯುಕ್ತ ಇನ್ಸ್ ಪೆಕ್ಟರ್ ಎಂದು ಹೇಳಿದ್ದಾನೆ. ಬಳಿಕ ನಮ್ಮ ಲೋಕಾಯುಕ್ತ ಡಿವೈ ಎಸ್ ಪಿ ಮಾತನಾಡುತ್ತಾರೆ ಎಂದಿದ್ದಾನೆ. ನಂತರ ಧ್ವನಿ ಬದಲಿಸಿಕೊಂಡು ನಾನು ಲೋಕಾಯುಕ ಡಿವೈ ಎಸ್ ಪಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಕ್ಲೋಸ್ ಮಾಡಲು ಹಣದ ವ್ಯವಹಾರ ಮಾಡಬೇಕು ಎಂದಿದ್ದಾನೆ.
ಅನುಮಾನಗೊಂಡ ರಾಮದಾಸಪ್ಪ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ನಕಲಿ ಲೋಕಾಯುಕ್ತ, ಆರೋಪಿ ತ್ಯಾಗರಾಜ್ ನನ್ನು ಬಂಧಿಸಿದ್ದಾರೆ.