ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯುವಕ-ಯುವತಿಯರು ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಥವಾ ಪೋಷಕರು ಬೈದರು, ಅವಮಾನವಾಯಿತು ಎಂಬ ಕಾರಣಕ್ಕೆ ಬೇರೆ ಆಲೋಚನೆಯನ್ನೇ ಮಾಡದೇ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಾರೆ. ಇಂತಹ ಹಲವಾರು ಘಟನೆಗಳು ನಮ್ಮ ಕಣ್ಮುಂದೆಯೇ ನಡೆಯುತ್ತಲೇ ಇರುತ್ತವೆ. ಆದರೆ ಸಾವಿಗೆ ಶರಣಾಗುವಂತ ದುಡುಕಿನ ನಿರ್ಧಾರವನ್ನು ಮಾಡಬೇಡಿ. ಸ್ವಲ್ಪ ತಾಳ್ಮೆ ವಿವೇಚನೆ ಎಂಬುದು ಇರಲಿ.
ಕಾರಣ ಯಾವುದೇ ಇರಲಿ ಪದೇ ಪದೇ ನಿಮ್ಮಲ್ಲಿ ಆತ್ಮಹತ್ಯೆಯಂತಹ ಆಲೋಚನೆ, ಬದುಕನ್ನೇ ಕೊನೆಗಾಣಿಸಿಕೊಳ್ಳಬೇಕೆಂಬ ವಿಚಾರ ಬರುತ್ತಿದ್ದರೆ ಆಪ್ತರೊಂದಿಗೆ ಕುಳಿತು ಮಾತನಾಡಿ. ಇಲ್ಲವೇ ಸಹಾಯವಾಣಿ, ಆರೋಗ್ಯವಾಣಿಗೆ ಕರೆ ಮಾಡಿ. ಇಂತಹ ಆಲೋಚನೆಯಿಂದ ಹೊರಬರಲು ಪ್ರಯತ್ನಿಸಿ.
ಸಹಾಯವಾಣಿ ಸಂಖ್ಯೆ: 9152987821, ಆರೋಗ್ಯ ವಾಣಿ ಸಂಖ್ಯೆ: 104. ಸಹಾಯ್ ಸಹಾಯವಾಣಿ ಸಂಖ್ಯೆ: 080-25497777 ಸಂಖ್ಯೆಗೆ ಕರೆ ಮಾಡಿ. ಆಪ್ತ ಸಮಾಲೋಚನೆ ಸಹಾಯ ಪಡೆದುಕೊಳ್ಳಬಹುದು.