BIG NEWS: ಕಾಂಗ್ರೆಸ್ ನವರಿಗೆ ಅಧಿಕಾರ ಸಿಕ್ಕಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ; ಮಾಜಿ ಸಚಿವ ಸಿ.ಸಿ. ಪಾಟೀಲ್ ವಾಗ್ದಾಳಿ

ಗದಗ: ಆಡಳಿತ ಹಾಗೂ ವಿಪಕ್ಷ ನಾಯಕರ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಕಾಂಗ್ರೆಸ್ ನಾಯಕರನ್ನು ಮಾಜಿ ಸಚಿವ ಸಿ.ಸಿ.ಪಾಟೀಲ್ ಭಸ್ಮಾಸುರನಿಗೆ ಹೋಲಿಕೆ ಮಾಡಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಸಿ.ಪಾಟೀಲ್, ಕಾಂಗ್ರೆಸ್ ನವರಿಗೆ ಅಧಿಕಾರ ಸಿಕ್ಕಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ. ಸರ್ಕಾರದ ಲೋಪ-ದೋಷವಾದಾಗ ಎತ್ತಿ ಹಿಡಿಯಬೇಕಾಗಿದ್ದು, ವಿಪಕ್ಷಗಳ ಧರ್ಮ ಎಂದರು.

ಕಾಂಗ್ರೆಸ್ ನಾಯಕರೆಲ್ಲರೂ ಅಧಿಕಾರದ ಮದದಲ್ಲಿದ್ದಾರೆ. ಅವರಿಗೆ 136 ಸೀಟು ಬಂದಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ. ಅಭಿವೃದ್ಧಿ ಕಾರ್ಯಕ್ರಮ ಒಂದೂ ಇಲ್ಲ. ನಾವು ಜಾರಿಗೆ ತಂದಿದ್ದ ಯೋಜನೆಗಳನ್ನೂ ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಬಿಜೆಪಿಯವರು ಬರ ಅಧ್ಯಯನದ ಮುಲಕ ಡ್ರಾಮಾ ಕಂಪನಿ ಶುರು ಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಸಿ.ಪಾಟೀಲ್, ನಾಟಕ ಮಾಡುವುದಕ್ಕೆ ಹಚ್ಚಿದವರು ಯಾರು? ಅವರು ಸರಿಯಾಗಿ ಅನುದಾನ ಕೊಟ್ಟಿದ್ದರೆ ನಾವ್ಯಾಕೆ ನಾಟಕ ಶುರು ಮಾಡುತ್ತಿದ್ದೆವು? ಎಂದು ಪ್ರಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read