ಬೆಂಗಳೂರು : ಬಹಿರಂಗ ಹೇಳಿಕೆ ನೀಡಿ ‘ರಾಜಕೀಯ ಭವಿಷ್ಯ’ ಹಾಳು ಮಾಡ್ಕೊಬೇಡಿ ಎಂದು ಶಾಸಕರು, ಸಚಿವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪಕ್ಷದ ಬಗ್ಗೆ ಸಚಿವರು, ಶಾಸಕರು ಪಕ್ಷದ ಚೌಕಟ್ಟು ಮೀರಿ ಬಹಿರಂಗ ಹೇಳಿಕೆ ನೀಡುತ್ತಿರುವುದು ಕಂಡು ಬಂದ ಬೆನ್ನಲ್ಲೇ ಇಂದು ಕಾವೇರಿ ನಿವಾಸದಲ್ಲಿ ಡಿಕೆಶಿ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಯಾವುದೇ ಹೇಳಿಕೆಗೆ ರಿಯಾಕ್ಟ್ ಮಾಡಬೇಡಿ , ಯಾರೂ ಕೂಡ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಲು ಹೋಗಬೇಡಿ, ಜತೆಗೆ ಪಕ್ಷದ ಭವಿಷ್ಯವನ್ನು ಕೂಡ ಹಾಳು ಮಾಡ್ಬೇಡಿ ಎಂದು ಖಡಕ್ ಸೂಚನೆ ನೀಡಿದರು.
ನಾವು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸಮಪರ್ಕವಾಗಿ ಜಾರಿಯಾಗಿದೆಯೇ ಎಂದು ಪರಿಶೀಲನೆ ನಡೆಸಬೇಕು. ಲೋಕಸಭೆ ಚುನಾವಣೆ ಬಹಳ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದರು.ಇನ್ನೂ, ನೋಟಿಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಐಟಿ, ಇಡಿ, ಸಿಬಿಐ ಕೇಸ್ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ . ‘ನಾನೇನು ತಪ್ಪು ಮಾಡಿಲ್ಲ, ನಾನೇನು ಭಯಪಡಲ್ಲ. ನಾನು, ನನ್ನ ಪತ್ನಿ ಅಕೌಂಟ್ ಜನರ ಮುಂದಿದೆ. ತೆರಿಗೆ ಕಟ್ಟುತ್ತೇವೆ ಎಂದರು.