ಬೆಂಗಳೂರು : ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವಿವಿಧ ಜಿ.ಪಂ ಇಲಾಖೆಗಳ ಹೆಚ್ಚುವರಿ ವೇತನ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪಂಚಾಯತಿಗಳ ಹಾಗೂ ಅವುಗಳ ವ್ಯಾಪ್ತಿಯ ಇಲಾಖೆಗಳಲ್ಲಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ, ದಿನಗೂಲಿ ನೌಕರರ ನಿವೃತ್ತಿ ಸೌಲಭ್ಯಗಳ ಪಾವತಿಗಾಗಿ, ಹೊರಗುತ್ತಿಗೆ ಸಿಬ್ಬಂದಿ ವೇತನ ಹಾಗೂ ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಬಾಕಿ/ಪ್ರಸಕ್ತ ಸಾಲಿನ ವೇತನ, ದಿನಗೂಲಿ ನೌಕರರ ನಿವೃತ್ತಿ ಸೌಲಭ್ಯಗಳ ಪಾವತಿಗಾಗಿ, ಹೊರಗುತ್ತಿಗೆ ಸಿಬ್ಬಂದಿ ವೇತನ ಹಾಗೂ ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಅನುದಾನವನ್ನು ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.1226.17ಲಕ್ಷ (ರೂಪಾಯಿ ಒಂದು ಸಾವಿರದ ಎರಡು ನೂರ ಇಪ್ಪತ್ತಾರು ಲಕ್ಷದ ಹದಿನೇಳು ಸಾವಿರಗಳು ಮಾತ್ರ) ಗಳನ್ನು ಬಿಡುಗಡೆಗೊಳಿಸಿದೆ.